Saturday, August 22, 2026

BDA Apartments

Home Front Page ಯುವಕ, ಯುವತಿಯರಿಗೆ ಆತಂಕ ಬೇಡ: ಶೀಘ್ರದಲ್ಲಿ ಖಾಲಿ ಹುದ್ದೆಗಳ ಭರ್ತಿ- ಸಿಎಂ ಸಿದ್ದರಾಮಯ್ಯ ಭರವಸೆ

ಯುವಕ, ಯುವತಿಯರಿಗೆ ಆತಂಕ ಬೇಡ: ಶೀಘ್ರದಲ್ಲಿ ಖಾಲಿ ಹುದ್ದೆಗಳ ಭರ್ತಿ- ಸಿಎಂ ಸಿದ್ದರಾಮಯ್ಯ ಭರವಸೆ

ದಾವಣಗೆರೆ,ಏಪ್ರಿಲ್,6,2026 (www.justkannada.in):  ರಾಜ್ಯದಲ್ಲಿ ನೇಮಕಾತಿಗಳಿಗೆ ತಡೆ ಬದ್ದು ಎರಡು ವರ್ಷಗಳೇ ಕಳೆದಿದ್ದು ಸರ್ಕಾರದ ವಿರುದ್ದ ಉದ್ಯೋಗಾಕಾಂಕ್ಷಿಗಳು ಸಿಟ್ಟಿಗೆದ್ದು ಈಗಾಗಲೇ ಬೃಹತ್ ಮಟ್ಟದ ಹೋರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಸಿಎಂ ಸಿದ್ದರಾಮಯ್ಯ ಯುವಕ, ಯುವತಿಯರಿಗೆ ಖಾಲಿ ಹುದ್ದೆಗಳ ಭರ್ತಿ ಬಗ್ಗೆ ಭರವಸೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ,  ಯುವಕ, ಯುವತಿಯರು ಆತಂಕ ಪಡುವ ಅಗತ್ಯವಿಲ್ಲ.  ಶೀಘ್ರದಲ್ಲೇ ಖಾಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದರು.

ರಾಜ್ಯ ಸರ್ಕಾರ ಹೆಚ್ಚು ಸಾಲ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಬೊಮ್ಮಯಿ ಅಶೋಕ್ ಗೆ ಹೇಳುತ್ತೇನೆ.  ಮೋದಿ 12 ವರ್ಷಗಳಲ್ಲಿ 165 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ ರಾಜ್ಯದ ಸಾಲವನ್ನು ನಿಗದಿ ಮಾಡುವುದು ಕೇಂದ್ರ ಸರ್ಕಾರ ಸುಳ್ಳು ಬಿಜೆಪಿಯವರ ಮನೆದೇವರು ಸುಳ್ಳು ಹೇಳಿ ದಾರಿ  ತಪ್ಪಿಸುತ್ತಿದ್ದಾರೆ ಎಂದರು.

Key words: Recruitment, vacant posts, filled soon, CM Siddaramaiah