Friday, August 14, 2026

BDA Apartments

Home Front Page ದಿಢೀರ್ ಕುಸಿದು ಬಿದ್ದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ದಿಢೀರ್ ಕುಸಿದು ಬಿದ್ದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಬೆಂಗಳೂರು,ಏಪ್ರಿಲ್,3,2026 (www.justkannada.in): ಕಾರ್ಯಕ್ರಮವೊಂದರಲ್ಲಿ ಭಾಷಣ ಮುಗಿಸಿ ಕುಳಿತುಕೊಳ್ಳವ ವೇಳೆ ದಿಢೀರ್ ಕುಸಿದು ಬಿದ್ದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಸ್ವಸ್ಥರಾಗಿದ್ದು,  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಇಂದು ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಭಾಗವಹಿಸಿದ್ದರು. ಈ ಮಧ್ಯೆ ಭಾಷಣ ಮುಗಿಸಿ ಕುಳಿತು ಕೊಳ್ಳುವ ವೇಳೆ ಸಂತೋಷ್ ಹೆಗ್ಡೆ ದಿಢೀರ್ ಕುಸಿದು ಬಿದ್ದು ಅಸ್ವಸ್ಥರಾದರು.

ತಕ್ಷಣವೇ ಸ್ಪೀಕರ್  ಯು.ಟಿ. ಖಾದರ್  ಅವರ ಕಾರಿನಲ್ಲಿ ಸಂತೋಷ್ ಹೆಗಡೆ ಅವರನ್ನು ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಣಿಪಾಲ್ ಆಸ್ಪತ್ರೆಗೆ ಸಂತೋಷ್ ಹೆಗ್ಡೆ ಅವರನ್ನ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Retired Lokayukta Justice, Santosh Hegde, admitted, hospital