Wednesday, August 19, 2026

BDA Apartments

Home Front Page ಇವಿ ವಾಹನಗಳಿಗೆ ತೆರಿಗೆ ವಿನಾಯಿತಿ ಹಿಂಪಡೆದಿರುವ ನಿರ್ಧಾರ ಕೈಬಿಡಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹ

ಇವಿ ವಾಹನಗಳಿಗೆ ತೆರಿಗೆ ವಿನಾಯಿತಿ ಹಿಂಪಡೆದಿರುವ ನಿರ್ಧಾರ ಕೈಬಿಡಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹ

ಬೆಂಗಳೂರು,ಏಪ್ರಿಲ್,3,2026 (www.justkannada.in): ಇವಿ ವಾಹನಗಳಿಗೆ ತೆರಿಗೆ ವಿನಾಯಿತಿ ಹಿಂಪಡೆದಿರುವ ನಿರ್ಧಾರವನ್ನು ಹಿಂಪಡೆಯಿರಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.

ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರ 250 ಕೋಟಿ ರೂಪಾಯಿ ತೆರಿಗೆ ವಿನಾಯಿತಿ ಹಿಂಪಡೆದಿದೆ. ರಾಜ್ಯ ಸರ್ಕಾರ ತಕ್ಷಣ ತನ್ನ ನಿರ್ಧಾರ ಹಿಂಪಡೆಯಬೇಕು.  ಇಲ್ಲದಿದ್ದರೆ ಇದು ಇವಿ ವಾಹನಗಳಿಗೆ ಪರಿವರ್ತನೆ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ ಪೆಟ್ರೋಲ್ ಡೀಸೆಲ್ ವಾಹಗಳಿಗೆ ಪ್ರೋತ್ಸಹ ಕೊಟ್ಟಂತೆ ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕಿತ್ತು ಎಂದರು.

ಕರ್ನಾಟಕದಲ ಸರ್ಕಾರದಲ್ಲಿ ಯಾವುದೇ ರೀತಿಯ ಆರ್ಥಿಕ ಶಿಸ್ತು ಇಲ್ಲ. ಇದು ರಾಜ್ಯ ಸರ್ಕಾರದ ದಿವಾಳಿತನ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

Key words: Union Minister, Pralhad Joshi,  withdrawal, tax exemption, EV vehicles