Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಸಿದ್ದರಾಮಯ್ಯ ಸಾಲಗಾರರಾ..? ಮೋದಿ ಸಾಲಗಾರರಾ..? ಬಿಜೆಪಿಗೆ ಕುಟುಕಿದ ಸಚಿವ ರಾಮಲಿಂಗರೆಡ್ಡಿ

ಸಿದ್ದರಾಮಯ್ಯ ಸಾಲಗಾರರಾ..? ಮೋದಿ ಸಾಲಗಾರರಾ..? ಬಿಜೆಪಿಗೆ ಕುಟುಕಿದ ಸಚಿವ ರಾಮಲಿಂಗರೆಡ್ಡಿ

ಬಾಗಲಕೋಟೆ, ಏಪ್ರಿಲ್,3,2026 (www.justkannada.in):  ಸಿಎಂ ಸಿದ್ದರಾಮಯ್ಯರನ್ನ ಸಾಲದರಾಮಯ್ಯ ಎಂದು ಟೀಕಿಸಿದ ಬಿಜೆಪಿ ನಾಯಕರಿಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿರುಗೇಟು ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ನಮ್ಮ ಸರ್ಕಾರ ನುಡಿದಂತೆ ನಡೆದಿದೆ.  ಬಿಜೆಪಿಯವರು ಸಿದ್ದರಾಮಯ್ಯರನ್ನ ಸಾಲರಾಮಯ್ಯ ಅಂತಾ ಹೇಳುತ್ತಾರೆ. ನಾವು ಮೋದಿರನ್ನ ಸಾಲದ ಮೋದಿ ಎಂದು ಹೇಳಬೇಕಾಗುತ್ತದೆ.  ಮೋದಿ ದೇಶದ ಸಾಲವನ್ನು 244 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ. ಈಗ ಹೇಳಿ ಸಿದ್ದರಾಮಯ್ಯ ಸಾಲಗಾರರಾ?  ಅಥವಾ ಮೋದಿ ಸಾಗಾರರಾ? ಎಂದು ಕುಟುಕಿದರು.

ಪ್ರಧಾನಿ  ಮೋದಿ ನೀಡಿದ್ದ ಯಾವುದೇ ಭರವಸೆ ಈಡೇರಲಿಲ್ಲ. ಕೇಂದ್ರದಲ್ಲಿ ದುರ್ಬಲ ಪ್ರಧಾನಿ ಇದ್ದಾರೆ.  ಟ್ರಂಪ್ ಹೇಳಿದಂತೆ ಕೇಳುತ್ತಾರೆ ಟ್ರಂಪ್ ಬಂದರೆ ಹೆದರತ್ತಾರೆ ಎಂದು ಸಚಿವ ರಾಮಲಿಂಗರೆಡ್ಡಿ ಲೇವಡಿ ಮಾಡಿದರು.

Key words: Siddaramaiah, debtor, Modi, Minister, RamalingaReddy