Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಬಾಗಲಕೋಟೆ ಕ್ಷೇತ್ರದಲ್ಲಿ ಹಿಂದುತ್ವ ಗೆಲ್ಲುವುದು ನಿಶ್ಚಿತ- ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ

ಬಾಗಲಕೋಟೆ ಕ್ಷೇತ್ರದಲ್ಲಿ ಹಿಂದುತ್ವ ಗೆಲ್ಲುವುದು ನಿಶ್ಚಿತ- ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ

ಬಾಗಲಕೋಟೆ, ಏಪ್ರಿಲ್,3,2026 (www.justkannada.in): ಬಾಗಲಕೋಟೆ ಕ್ಷೇತ್ರದಲ್ಲಿ ಹಿಂದುತ್ವ ಗೆಲ್ಲುವುದು ನಿಶ್ಚಿತ. ನೂರಕ್ಕೆ ನೂರರಷ್ಟು  ಬಿಜೆಪಿಗೆ ಮತ ಹಾಕುತ್ತಾರೆಂಬ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ವೀರಣ ಚರಂತಿಮಠ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಮಾತನಾಡಿದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ನಗರ ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ಬೆಂಬಲ ಸಿಕ್ಕಿದೆ ಇಂತಿಷ್ಠೇ ಮತಗಳ ಅಂತರ  ಎಂದು ಹೇಳುವುದಿಲ್ಲ ಎಂದರು.

ಸಿಎಂ, ಸಚಿವರು ಬಾಗಲಕೋಟೆಯಲ್ಲಿ ಬೀಡುಬಿಟ್ಟ ವಿಚಾರ ಕುರಿತು ಪ್ರತಿಕ್ರಿಯಿಸಿದ ವೀರಣ ಚರಂತಿಮಠ,   ಸಿಎಂ ಸಚಿವರು ವೋಟ್ ಹಾಕುವುದಿಲ್ಲ ಜನ ವೋಟ್ ಹಾಕ್ತಾರೆ.  ಏ. 7 ರಂದು ಎಲ್ಲರನ್ನೂ ಹೊರಗೆ ಹಾಕುತ್ತಾರೆ. ಯಾರೇ ಬಂದರೂ ನಮಗೇನೂ ತೊಂದರೆ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಹಿಂದೂ ಅಲ್ಲ ಎಂದು ನಾನು ಹೇಳಿಲ್ಲ. ಹಿಂದುತ್ವ ಗೆಲ್ಲಬೇಕು ಬಿಜೆಪಿ ಗೆಲ್ಲಬೇಕು ಎಂದಿದ್ದೇನೆ ಎಂದರು.

Key words: Hindutva, win, Bagalkot constituency, BJP candidate, Veeranna Charantimath