Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಜನರು ಬದ್ಧರಿದ್ದಾರೆ- ಮಾಜಿ ಸಂಸದ ಪ್ರತಾಪ್ ಸಿಂಹ

ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಜನರು ಬದ್ಧರಿದ್ದಾರೆ- ಮಾಜಿ ಸಂಸದ ಪ್ರತಾಪ್ ಸಿಂಹ

ಬಾಗಲಕೋಟೆ,ಏಪ್ರಿಲ್,3,2026 (www.justkannada.in): ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಜನರು ಬದ್ಧರಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ವೀರಣ್ಣ ಚರಂತಿಮಠ ಗೆಲ್ಲುವ ವಿಶ್ವಾಸವಿದೆ. ಎಲ್ಲ ಕಡೆಯೂ ನಮಗೆ ಪೂರಕವಾದಂತಹ ವಾತಾವರಣ ಇದೆ. ಜನರು 2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರುತ್ತೆಂದು ಸೂಚನೆ ಕೊಡುತ್ತಿದ್ದಾರೆ.  ಕಳೆದ ಮೂರು ವರ್ಷದಿಂದ ಸರ್ಕಾರ ಗ್ಯಾರಂಟಿ ಅಂತಾ ತಮಟೆ ಹೊಡೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಭಯದಿಂದ ಸಿಎಂ, ಡಿಸಿಎಂ, ಸಚಿವರೆಲ್ಲರು ಪ್ರಚಾರಕ್ಕೆ ಬಂದಿದ್ದಾರೆ ಅವರ  ಸರ್ಕಾರವಿದೆ. ದುಡ್ಡು ಹಂಚಲು ಬಂದಿದ್ದಾರೆ.  ಆದರೆ ಉಪಚುನಾವಣೆಯಲ್ಲಿ ಜನರು ಬಿಜೆಪಿ ಗೆಲ್ಲಿಸಲು ಬದ್ದರಿದ್ದಾರೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

Key words: People, BJP, win, by-elections, Former MP, Pratap Simha