Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ರಾಜ್ಯದ ಹಣಕಾಸಿನ ಸ್ಥಿತಿ ಸುಭದ್ರ: ಗ್ಯಾರಂಟಿ ಜನರಿಗೆ ತಲುಪಿವೆ- ಸಿಎಂ ಸಿದ್ದರಾಮಯ್ಯ

ರಾಜ್ಯದ ಹಣಕಾಸಿನ ಸ್ಥಿತಿ ಸುಭದ್ರ: ಗ್ಯಾರಂಟಿ ಜನರಿಗೆ ತಲುಪಿವೆ- ಸಿಎಂ ಸಿದ್ದರಾಮಯ್ಯ

ದಾವಣಗೆರೆ,ಏಪ್ರಿಲ್,1,2026 (www.justkannada.in):  ರಾಜ್ಯದ ಹಣಕಾಸು ಸ್ಥಿತಿ ಸುಭ್ರದ್ರವಾಗಿದೆ. ನಾವು ಕೊಟ್ಟ ಗ್ಯಾರಂಟಿಗಳು ಜನರಿಗೆ ತಲುಪಿವೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದೆ.  ಅಚ್ಚೇದಿನ್ ಆಯೇಗಾ ಎಂದವರು ಏನು ಕೊಟ್ಟಿದ್ದಾರೆ ಎಂದು ಬಿಜೆಪಿಗೆ ಕುಟುಕಿದರು.

ದಾವಣಗೆರೆಯಲ್ಲಿ ಜಮೀರ್ ಪ್ರಚಾರ ಮಾಡುತ್ತಾರೆ. ಏಪ್ರಿಲ್ 5 ರಂದು ಜಮೀರ್ ದಾವಣಗೆರೆಯಲ್ಲಿ ಪ್ರಚಾರ ಮಾಡುತ್ತಾರೆ. ಏಪ್ರಿಲ್ 6 ಮತ್ತು 7 ರಂದು ಬಾಗಲಕೋಟೆಯಲ್ಲಿ ಜಮೀರ್ ಪ್ರಚಾರ ಮಾಡುತ್ತಾರೆ ಜಮೀರ್ ಜೊತೆ ನಾನು ಮಾತನಾಡಿದ್ದೇನೆ ಎಂದರು.

ಕುಟುಂಬ ರಾಜಕೀಯ ಬಗ್ಗೆ ಬಿಜೆಪಿ ನಾಯಕರ ಆರೋಪ  ವಿಚಾರ, ಬಿಎಸ್ ವೈ ಮಕ್ಕಳು ದೇವೇಗೌಡರ ಮಕ್ಕಳು ಏನಾಗಿದ್ದಾರೆ.  ನಾವು ಮಾಡಿದ್ರೆ ಮಾತ್ರ ಕುಟುಂಬ ರಾಜಕೀಯನಾ?  ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

Key words: State, financial condition, stable, CM Siddaramaiah