Friday, August 21, 2026

BDA Apartments

Home Front Page ಒಂದು ತಿಂಗಳೊಳಗೆ ಹುದ್ದೆಗಳ ಭರ್ತಿ ಎಂದು ಹೇಳಿದ್ರಿ: ಈ ವಿಚಾರ ಮರೆತು ಹೋದ್ರಾ ಸಿಎಂ ಅವರೇ?...

ಒಂದು ತಿಂಗಳೊಳಗೆ ಹುದ್ದೆಗಳ ಭರ್ತಿ ಎಂದು ಹೇಳಿದ್ರಿ: ಈ ವಿಚಾರ ಮರೆತು ಹೋದ್ರಾ ಸಿಎಂ ಅವರೇ? ಬಿವೈ ವಿಜಯೇಂದ್ರ

ಬಾಗಲಕೋಟೆ,ಏಪ್ರಿಲ್,1,2026 (www.justkannada.in):  ಕಳೆದ ಫೆಬ್ರವರಿಯಲ್ಲಿ ಒಂದು ತಿಂಗಳೊಳಗೆ 56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸುತ್ತೇವೆ ಎಂದು ಉದ್ಯೋಗಾಕಾಂಕ್ಷಿಗಳಿಗೆ ಭರವಸೆ ಕೊಟ್ಟು ಈಗ ಅದರ ಬಗ್ಗೆ ಸೊಲ್ಲೆತ್ತದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ, ಅಧಿಕಾರಕ್ಕೆ ಬಂದು ಒಂದೇ ತಿಂಗಳಲ್ಲಿ ಸರ್ಕಾರಿ ಹುದ್ದೆಗಳ ಭರ್ತಿ ಅಂತ ಹೇಳಿದ್ರಿ ಈ ವಿಚಾರವನ್ನ ಮರೆತು ಹೋದ್ರಾ ಮುಖ್ಯಮಂತ್ರಿಗಳೇ?  ಯುವಜನತೆ ಬೀದಿಗಿಳಿದು ಹೋರಾಟ ಮಾಡುವ ದುಸ್ಥಿತಿಗೆ ರಾಜ್ಯವನ್ನು ತಂದಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ  ತನ್ನ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಲಿ. ಇದೇ ಮೊದಲ ಬಾರಿ ಅಲ್ಲ ಹಲವು ಬಾರಿ ಪ್ರಸ್ತಾಪ ಮಾಡಿದ್ದೇವೆ.  ಸಿಎಂಗೆ ಬಾಗಲಕೋಟೆ ಬಿಸಲಿನ ಭಯವೋ? ಸೋಲಿನ ಭಯವೋ? ಹತಾಶರಾಗಿ ಸಿಎಂ ನನ್ನ ಟೀಕೆ ಮಾಡುತ್ತಿದ್ದಾರೆ ಸಿಎಂ ಅವರಲ್ಲಿ ಇಂದು ಕೂಡ ನಾನು ಆಗ್ರಹ ಮಾಡುತ್ತೇನೆ.  ರಾಜ್ಯದ ಹಣಕಾಸಿನ ಸ್ಥಿತಿ ಬಗ್ಗೆ ಸತ್ಯ ಮರೆಮಾಚದೆ ಜನರಿಗೆ ತಿಳಿಸಿ. ನಿಮ್ಮ ಸರ್ಕಾರ ಬಂದು ಮೂರು ವರ್ಷ ಆಗಿದೆ ಎಂದು ಗುಡುಗಿದರು.

Key words: Bagalakote, By-election, BY Vijyendra, Recruitment