ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ ಅಂತ ಮುಸ್ಲೀಮರು ಬಿಜೆಪಿಗೆ ಮತ ಹಾಕಲ್ಲ-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಮಾರ್ಚ್,30,2026 (www.justkannada.in):  ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯಲ್ಲಿ ಮುಸ್ಲೀಮರ ಮತ ಪಡೆಯಲು ಬಿಜೆಪಿ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ ಅಂತ ಮುಸ್ಲೀಮರು ಬಿಜೆಪಿಗೆ ಮತ ಹಾಕಲ್ಲ ಎಂದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಮುಸ್ಲೀಮರ ವೋಡ್ ಕೇಳುವ ಹಕ್ಕು ಬಿಜೆಪಿ ಅವರಿಗಿದೆ. ಕಾಂಗ್ರೆಸ್ ಮುಸ್ಲೀಮರಿಗೆ ಟಿಕೆಟ್ ಕೊಟ್ಟಿಲ್ಲ  ಎಂದು ಮುಸ್ಲೀಮರು ಬಿಜೆಪಿಗೆ ಮತ ಹಾಕಲ್ಲ. ಮುಸ್ಲಿಮರು ಟಿಕೆಟ್ ಕೇಳದರು.  ಆದರೆ ಕೊಡಲು ಆಗಲಿಲ್ಲ. ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಲಿದ್ದಾರೆ  ಎಂದರು.

ಬಿಜೆಪಿ ಅಧಿಕಾರದಲ್ಲಿದ್ದರೆ  ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ರೀತಿ ಮಾಡುತ್ತಾರೆ.  ಮುಸ್ಲೀಮರು ಅಷ್ಟೆ ಅಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು, ಬಡವರು ಮಹಿಳೆಯರನ್ನೂ ಬಿಜೆಪಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಸಚಿವ ರಾಮಲಿಂಗರೆಡ್ಡಿ ಕಿಡಿಕಾರಿದರು.

Key words:   Muslims, vote, BJP, Minister,  Ramalinga Reddy