Monday, August 10, 2026

BDA Apartments

Home Front Page ಸಾದಿಕ್ ಪೈಲಾನ್ ಸಂಧಾನ ಯಶಸ್ವಿ: ಬಿಜೆಪಿಗೆ ನಿರಾಸೆ- ಸಚಿವ ಎಂ.ಬಿ ಪಾಟೀಲ್

ಸಾದಿಕ್ ಪೈಲಾನ್ ಸಂಧಾನ ಯಶಸ್ವಿ: ಬಿಜೆಪಿಗೆ ನಿರಾಸೆ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಮಾರ್ಚ್,28,2026 (www.justkannada.in): ದಾವಣಗೆರೆ ದಕ್ಷಿಣ ಉಪಚುನಾವಣೆ ಕಣದಲ್ಲಿ ಬಂಡಾಯವೆದ್ದಿದ್ದ ಸಾದಿಕ್ ಪೈಲ್ವಾನ್ ಅವರನ್ನ ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದು ಈ ಮೂಲಕ ಬಿಜೆಪಿಗೆ ನಿರಾಸೆಯಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಉಪಚುನಾವಣೆ ಹಿನ್ನೆಲೆ, ಕಾಂಗ್ರೆಸ್ ನಲ್ಲಿ ಇದ್ದ ಗೊಂದಲ ಬಗೆಹರಿದಿದೆ. ಸಾದಿಕ್ ಪೈಲ್ವಾನರನ್ನು ಸಿಎಂ ಡಿಸಿಎಂ ಮನವೊಲಿಸಿದ್ದಾರೆ ಸಾದಿಕ್ ಪೈಲ್ವಾನ್ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಲ್ಲಾ ಸಮುದಾಯಗಳ ಬೆಂಬಲದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಬಾಗಲಕೋಟೆ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಮೀರ್ ಅಹ್ಮದ್ ಖಾನ್ ಅವರಿಗೆ ಕೇರಳ ಜವಾಬ್ದಾರಿ ಇರುವುದರಿಂದ ಸಂಧಾನಕ್ಕೆ  ಬಂದಿಲ್ಲ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ. ಈಗ ಬಿಜೆಪಿಗೆ ನಿರಾಸೆಯಾಗಿದೆ 2028ಕ್ಕೂ ನಿರಾಸೆಯಾಗಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

Key words: By-election, BJP, disappointed, Minister, M.B. Patil