ಬೆಂಗಳೂರು,ಮಾರ್ಚ್,28,2026 (www.justkannada.in): ದ್ವಿಭಾಷಾ ಸೂತ್ರ ಅಳವಡಿಕೆಗೆ ಒತ್ತು ನೀಡಲಾಗುತ್ತಿದೆ. ಇದರಿಂದ ಬಹಳ ಸಂತೋಷವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ದ್ವಿಭಾಷಾ ಸೂತ್ರ ಅಳವಡಿಕೆಗೆ ಒತ್ತು ನೀಡಲಾಗುತ್ತದೆ. ಅಧೀವೇಶನದ ಮುಗಿದ ಬಳಿಕ ಮಾಡೋಣ ಅಂದುಕೊಂಡಿದ್ದೀವಿ. ಬೇರೆ ಬೇರೆ ಭಾಷೆ ದ್ವೇಷ ಮಾಡಬಾರದು. ಬೇರೆ ಭಾಷೆ ಹೇರಬಾರದು ಮಕ್ಕಳ ಮೇಲೆ ಒತ್ತಡ ಹಾಕಬಾರದು ದ್ವಿಭಾಷಾ ಸೂತ್ರ ಅಳವಡಿಕೆಯಿಂದ ಬಹಳ ಸಂತೋಷ ಆಗಿದೆ. ಸಾಹಿತಿ ಕನ್ನಡ ಪರ ಸಂಘಟನೆಗಳು ಮನವಿ ಮಾಡಿದ್ದವು. ಅವರ ಜೊತೆ ಚರ್ಚೆಮಾಡಿ ನಾವು ತೀರ್ಮಾನ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಜೊತೆ ಮಾತಾಡಿದ್ದೇವೆ ಎಂದರು.
ರಾಜ್ಯದ ಮಕ್ಕಳಿಗೆ ಒಳ್ಳೆಯದಾಗಬೇಕು ಅಷ್ಟೆ ಸರ್ಕಾರ ಹೆದರಿದ್ಯ ಅಂತಾ ಸುರೇಶ್ ಕುಮಾರ್ ಪ್ರಶ್ನಿಸಿದರು. ಬಿವೈ ವಿಜಯೇಂದ್ರ ಪೋಸ್ಟ್ ಮಾಡಿದ್ದು ನೋಡಿದ್ದೇನೆ ಬಿಎಸ್ ವೈಗೆ ಇದ್ದ ಕನ್ನಡ ಅಭಿಮಾನ ವಿಜಯೇಂದ್ರ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ತಿಳಿಸಿದರು.
ಇನ್ನು ಜೂನ್ ತಿಂಗಳೊಳಗೆ ಶಿಕ್ಷಕರ ನೇಮಕಾತಿ ಮಾಡುತ್ತೇವೆ ಎಂದು ಪದೇ ಪದೇ ಹೇಳಿಕೆ ಭರವಸೆ ನೀಡುತ್ತಿದ್ದ ಮಧು ಬಂಗಾರಪ್ಪರಿಂದ ಆ ವಿಚಾರದ ಬಗ್ಗೆ ಈಗ ಪ್ರಸ್ತಾಪವೇ ಇಲ್ಲ.
Key words: Very happy, implementation, bilingual formula, Minister, Madhu Bangarappa







