Tuesday, August 11, 2026

BDA Apartments

Home Front Page ಉಪಚುನಾವಣೆ: ’ಕೈ’ ಸಂಧಾನ ಸಕ್ಸಸ್: ಮೂವರು ನಾಮಪತ್ರ ವಾಪಸ್

ಉಪಚುನಾವಣೆ: ’ಕೈ’ ಸಂಧಾನ ಸಕ್ಸಸ್: ಮೂವರು ನಾಮಪತ್ರ ವಾಪಸ್

ಬಾಗಲಕೋಟೆ,ಮಾರ್ಚ್,26,2026 (www.justkannada.in):  ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯವೆದ್ದು ಕಣಕ್ಕಿಳಿದಿದ್ದ ಮೂವರು ಇದೀಗ ನಾಮಪತ್ರ ಹಿಂಪಡೆದು ಕಾಂಗ್ರೆಸ್ ಗೆ ಬೆಂಬಲ ಘೋಷಿಸಿದ್ದಾರೆ.

ಇಂದು ಸಚಿವ ತಿಮ್ಮಾಪುರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು ಪಕ್ಷೇತರವಾಗಿ ಸ್ಪರ್ಧಿಸಿದ್ದ ಗೋವಿಂದರಾಜ ಬಳ್ಳಾರಿ, ಅಯೂಬ್ ಬಾಗೇವಾಡಿ, ಅಬ್ದುಲ್ ರಜಾಕ್ ಬಳಿಕಾಯಿ  ಮೂವರು ನಾಮಪತ್ರ ಹಿಂಪಡೆದು ಕಾಂಗ್ರೆಸ್ ಗೆ ಬೆಂಬಲ ಘೋಷಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ಪಕ್ಷೇತರರು ತಿಳಿಸಿದ್ದಾರೆ. ನಾಮಪತ್ರ  ವಾಪಸ್ ಬಳಿಕ ಮಾತನಾಡಿದ ಸಚಿವ ತಿಮ್ಮಾಪುರ, ನಾಮಪತ್ರ ಹಿಂಪಡೆದವರಿಗೆ ಅವರದ್ದೇ ಆದ ಶಕ್ತಿ ಇದೆ. ಯಾವುದೇ ಕಂಡಿಷನ್ ಇಲ್ಲದೆ ನಾಮಪತ್ರ ವಾಪಸ್ ಪಡೆದಿದ್ದಾರೆ. ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ. ಮೂವರು ಮುಖಂಡರು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಾರೆ ಎಂದರು.

Key words: Bagalkot, by-election, Three, withdraw, nominations