Sunday, August 9, 2026

BDA Apartments

Home Front Page ಸಿಎಂ ಸಿದ್ದರಾಮಯ್ಯ ಪ್ರಚಾರದಿಂದ ನಮಗೇನು ವ್ಯತ್ಯಾಸವಾಗಲ್ಲ- ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ

ಸಿಎಂ ಸಿದ್ದರಾಮಯ್ಯ ಪ್ರಚಾರದಿಂದ ನಮಗೇನು ವ್ಯತ್ಯಾಸವಾಗಲ್ಲ- ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ

ಬಾಗಲಕೋಟೆ, ಮಾರ್ಚ್,24,2026 (www.justkannada.in):  ಬಾಗಲಕೋಟೆ ಉಪಚುನಾವಣೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಪ್ರಚಾರಕ್ಕೆ ಬಂದರೆ ನಮಗೇನೂ ವ್ಯತ್ಯಾಸವಾಗಲ್ಲ ಎಂದು ಬಿಜೆಪಿ ಅಭ್ಯರ್ಥೀ ವೀರಣ್ಣ ಚರಂತಿಮಠ ತಿಳಿಸಿದರು.

ಇಂದು  ಪ್ರಚಾರಕಾರ್ಯ ಚುರುಕುಗೊಳಿಸಿದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ  ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಮೋಟಗಿ ಬವೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ  ಕೌಲಪೇಟೆ ದೊಡ್ಡಸಾಬನ ಓಣಿಯಲ್ಲಿ ಪ್ರಚಾರ ನಡೆಸಿದರು.

ಸಿಎಂ ಸಿದ್ದರಾಮಯ್ಯ ನಾಲ್ಕೈದು ದಿನ ಬಾಗಲಕೋಟೆಯಲ್ಲಿರುತ್ತಾರೆ ಎಂಬ ವಿಚಾರ ಕುರಿತು ಮಾತನಾಡಿದ ವೀರಣ್ಣ ಚರಂತಿಮಠ,  ಎರಡುವರೆ ಲಕ್ಷ ಜನರ ಮತವನ್ನೇ ಸಿಎಂ ಹಾಕ್ತಾರಾ? ಸಿಎಂ ಸಿದ್ದರಾಮಯ್ಯ ಪ್ರಚಾರದಿಂದ ನಮಗೇನು ವ್ಯತ್ಯಾಸ ಆಗಲ್ಲ.  ಯತ್ನಾಳ್ ಪ್ರಚಾರಕ್ಕೆ ಬರ್ತಾರೆ ಎಂದು ಮೊದಲೇ ಹೇಳಿದ್ದೇನೆ. ಪ್ರಚಾರಕ್ಕೆ ಬರುವುದಾಗಿ ಯತ್ನಾಳ್ ಕೂಡ ಹೇಳಿದ್ದಾರೆ.  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಹ ಪ್ರಚಾರಕ್ಕೆ ಬರುತ್ತಾರೆ ಎಂದರು.

Key words: CM Siddaramaiah, campaign, BJP candidate, Veeranna Charantimath