ಬೆಂಗಳೂರು,ಮಾರ್ಚ್,24,2026 (www.justkannada.in): ಲಾರಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಚಾಲಕನನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರವಿ ಬಂಧಿತ ಆರೋಪಿ. ಈತ ಆಂಧ್ರದ ವಿಶಾಖಪಟ್ಟಣದ ಅರಕು ಭಾಗದಿಂದ ಗಾಂಜಾ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ನಾಯಂಡಳ್ಳಿ ಸಮೀಪ ಗಾಂಜಾವನ್ನ ಸೀಜ್ ಮಾಡಿ ಆರೋಪಿ ರವಿಯನ್ನ ವಶಕ್ಕೆ ಪಡೆದಿದ್ದಾರೆ.
3 ಕೋಟಿ ರೂ.ಗೂ ಅಧಿಕ ಮೌಲ್ಯದ 332 ಕೆ.ಜಿ ಗಾಂಜಾವನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆರೋಪಿ ರವಿ ಮೈಸೂರು, ಮಳವಳ್ಳಿ ಕಡೆಗೆ ಲಾರಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಎನ್ನಲಾಗಿದ್ದು ಲಾರಿಯನ್ನೂ ಸಹ ವಶಕ್ಕೆ ಪಡೆಯಲಾಗಿದೆ.
Key words: Marijuana worth, over, Rs 3 crore, seized, arrest







