Tuesday, September 22, 2026

BDA Apartments

ಕಿರಿಕ್ ಬೆಡಗಿ ರಶ್ಮಿಕಾ ಮಂದಣ‍್ಣ ಈಗ ನ್ಯಾಷನಲ್ ಕ್ರಷ್ ! BDA JK_Adv BDA Adv
Home Front Page ರಾಹುಲ್ ಗಾಂಧಿ ಭೇಟಿಯಾಗಬೇಕಿತ್ತು, ಆದ್ರೆ ಆಗಲಿಲ್ಲ- ಮಾಜಿ ಸಚಿವ ಕೆ.ಎನ್ ರಾಜಣ್ಣ

ರಾಹುಲ್ ಗಾಂಧಿ ಭೇಟಿಯಾಗಬೇಕಿತ್ತು, ಆದ್ರೆ ಆಗಲಿಲ್ಲ- ಮಾಜಿ ಸಚಿವ ಕೆ.ಎನ್ ರಾಜಣ್ಣ

ನವದೆಹಲಿ,ಮಾರ್ಚ್,18,2026 (www.justkannada.in):  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಬೇಕಿತ್ತು ಆದರೆ ಭೇಟಿಯಾಗಲು ಆಗಲಿಲ್ಲ ಎಂದು  ಮಾಜಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

ನವದೆಹಲಿಯಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಕೆ.ಎನ್ ರಾಜಣ್ಣ, ಎಐಸಿಸಿ ಕಚೇರಿಯಲ್ಲಿ ಆದಿವಾಸಿ ಕಾರ್ಯಕ್ರಮ ನಡೆಯಿತು.  ನಾನು  ಸತೀಶ್ ಜಾರಕಿಹೊಳಿ ಭಾಗವಹಿಸಿದ್ದ. ವು ಚುನಾವಣೆಯಲ್ಲಿ ಆದಿವಾಸಿಗಳು ಗೆಲ್ಲುವ ಬಗ್ಗೆ ಚರ್ಚೆ ಮಾಡಲಾಯಿತು. ದೆಹಲಿಯಲ್ಲಿ ಕುಳಿತು ಚರ್ಚೆ ಮಾಡಿದ್ರೆ ಆಗಲ್ಲ ರಾಜ್ಯಗಳಲ್ಲಿ ಚರ್ಚಿಸಿ ಎಂದು ಅದಿವಾಸಿ ಸಮುದಾಯದ ಸಭೆಯಲ್ಲಿ ಸಲಹೆ ನೀಡಿದ್ದೇವೆ.  ರಾಜ್ಯಗಳಲ್ಲಿ ಸಮಾವೇಶ ಮಾಡಿ ಸಮಸ್ಯೆ ಆಲಿಸಿ ಎಂದು ಹೇಳಿದ್ದೇವೆ ಎಂದರು.

ಕರ್ನಾಟಕ ಸೇರಿದಂತೆ ದೇಶಾದ್ಯಂತ ಆದಿವಾಸಿಗಳ ಸಮಸ್ಯೆ ಬಗ್ಗೆ ಚರ್ಚೆಯಾಗಬೇಕು.  ಆದಿವಾಸಿಗಳ ಒಕ್ಕಲೆಬ್ಬಿಸುವ ಕೆಲವಾಗುತ್ತಿದೆ ಪರಿಹಾರ ನೀಡಬೇಕು ಎಂದರು.

ರಾಹುಲ್ ಗಾಂಧಿ ಲೋಕಸಭೆಯಲ್ಲಿದ್ದರಿಂದ ತಡವಾಗಿ ಬರ್ತಾರೆ ಅಂತಿತ್ತು. ಯುಗಾದಿ ಹಬ್ಬ ಇರುವ ಕಾರಣ ನಾವು ಊರಿಗೆ ಹೋಗಬೇಕು. ರಾಹುಲ್ ಗಾಂಧಿ ಭೇಟಿಯಾಗಬೇಕಿತ್ತು ಆದರೆ ಆಗಲಿಲ್ಲ ಎಂದು ರಾಜಣ್ಣ ತಿಳಿಸಿದರು.

Key words: meet, Rahul Gandhi, Former Minister, KN Rajanna