Sunday, September 20, 2026

BDA Apartments

ಸಂಪುಟ ಪುನಾರಚನೆ ವೇಳೆ ನಮಗೂ ಅವಕಾಶ ನೀಡಿ: ಸಿಎಂ ಸಿದ್ದರಾಮಯ್ಯಗೆ 16 ಶಾಸಕರಿಂದ...
Home Front Page ಸಂಪುಟ ಪುನಾರಚನೆ ವೇಳೆ ನಮಗೂ ಅವಕಾಶ ನೀಡಿ: ಸಿಎಂ ಸಿದ್ದರಾಮಯ್ಯಗೆ 16 ಶಾಸಕರಿಂದ ಮನವಿ

ಸಂಪುಟ ಪುನಾರಚನೆ ವೇಳೆ ನಮಗೂ ಅವಕಾಶ ನೀಡಿ: ಸಿಎಂ ಸಿದ್ದರಾಮಯ್ಯಗೆ 16 ಶಾಸಕರಿಂದ ಮನವಿ

ಬೆಂಗಳೂರು,ಮಾರ್ಚ್,17,2026 (www.justkannada.in):  ಸಚಿವ ಸಂಪುಟ ಪುನಾರಚನೆ ವೇಳೆ ನಮಗೂ ಅವಕಾಶ ನೀಡಿ ಎಂದು ಕಾಂಗ್ರೆಸ್ ನ 16 ಶಾಸಕರು ಇಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ವಿಧಾನಸೌಧದ ಕಚೇರಿಯಲ್ಲಿ ಭೋಜನಾ ವಿರಾಮದ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನ ಎನ್ ಎ ಹ್ಯಾರಿಸ್,  ಹಂಪನಗೌಡ ಬಾದರ್ಲಿ, ಹೆಚ್ ಸಿ ಬಾಲಕೃಷ್ಣ, ನಾರಾಯಣಸ್ವಾಮಿ  ತನ್ವೀರ್ ಸೇಠ್ ಸೇರಿದಂತೆ 16 ಶಾಸಕರು ಭೇಟಿಯಾಗಿ ಮನವಿ ಮಾಡಿದ್ದಾರೆ.  ಕನಿಷ್ಠ 20 ಹಿರಿಯ ಶಾಸಕರಿಗೆ ಸಂಫುಟದಲ್ಲಿ ಸ್ಥಾನ ನೀಡಬೇಕು. 3ಕ್ಕೂ ಹೆಚ್ಚು ಬಾರಿ ನಾವು ಶಾಸಕರಾಗಿದ್ದೇವೆ ನಮಗೂ ಅವಕಾಶ ನೀಡಿ ಎಂದು ಕೋರಿದರು.

ಸಂಪುಟ ಪುನಾರಚನೆ ವಿಚಾರವಾಗಿ ಸ್ವತಃ ನಾನೇ ದೆಹಲಿಗೆ ಹೋಗುತ್ತೇನೆ ಉಪಚುನಾವಣೆ ಬಳಿಕ ಹೈಕಮಾಂಡ ನಾಯಕರನ್ನ ಭೇಟಿಯಾಗುತ್ತೇನೆ. ದೆಹಲಿ ಭೇಟಿ ವೇಳೆ ಹೈಕಮಾಂಡ್ ಗೆ ಈ ಬಗ್ಗೆ ತಿಳಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Key words:  cabinet restructure,  16 MLAs, meet, CM Siddaramaiah