Wednesday, July 29, 2026

BDA Apartments

Home Front Page ನಾಲ್ಕೈದು ದಿನಗಳ ನಂತರ LPG ಗ್ಯಾಸ್ ಸಿಲಿಂಡರ್ ಪೂರೈಕೆ- ಸಂಸದ ಬಸವರಾಜ ಬೊಮ್ಮಾಯಿ

ನಾಲ್ಕೈದು ದಿನಗಳ ನಂತರ LPG ಗ್ಯಾಸ್ ಸಿಲಿಂಡರ್ ಪೂರೈಕೆ- ಸಂಸದ ಬಸವರಾಜ ಬೊಮ್ಮಾಯಿ

ಬೆಂಗಳೂರು,ಮಾರ್ಚ್,13,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಗಳ ಪೂರೈಕೆಯಲ್ಲಿ ಕೊರತೆಯುಂಟಾಗಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಸೇರಿ ವಿಪಕ್ಷಗಳು ಮುಗಿಬಿದ್ದಿವೆ. ಈ ಕುರಿತು  ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಬಸವರಾಜ ಬೊಮ್ಮಾಯಿ, ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಎಲ್ಲಾ ಕಡೆಗಳಲ್ಲಿ ಸಮಸ್ಯೆ ಇದೆ.  ಕತಾರ್ ಅರೇಬಿಯಾದಿಂದ ಗ್ಯಾಸ್ ಸಿಲಿಂಡರ್ ಬರುತ್ತೆ. ಪೆಟ್ರೋಲ್ ಬೇರೆ ದೇಶಗಳಿಂದ ಬರಲಿದೆ. ಎಲ್ ಪಿಜಿ ತರಲು ನಾಲ್ಕೈದು ದೇಶಗಳ ಜೊತೆ ಮಾತುಕತೆ ನಡೆದಿದೆ.  ಇನ್ನು ನಾಳ್ಕೈದು ದಿನಗಳ ನಂತರ ಗ್ಯಾಸ್ ಸಿಲಿಂಡರ್ ಪೂರೈಕೆಯಾಗಲಿದೆ ಎಂದು ತಿಳಿಸಿದ್ದಾರೆ.

ಇರಾನ್ ಮೇಲೆ ಅಮೇರಿಕಾ , ಇಸ್ರೇಲ್ ದಾಳಿ ನಡೆಸಿದ್ದು ಪ್ರತ್ಯುತ್ತರವಾಗಿ ಇರಾನ್ ಸಹ ಪ್ರತಿದಾಳಿ ನಡೆಸಿ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಹರ್ಮುಜ್ ಜಲಸಂಧಿ ಬಳಿ ತೈಲಹೊತ್ತ ಹಡಗುಗಳನ್ನ ಇರಾನ್ ಗುರಿಯಾಗಿಸಿದ್ದು ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಹೇಳಲಾಗುತ್ತಿದೆ.

Key words: LPG, gas cylinders, supplied, MP, Basavaraj Bommai