ಬೆಂಗಳೂರು,ಮಾರ್ಚ್,5,2026 (www.justkannada.in): ನಮ್ಮ ಸರ್ಕಾರ ಯಾವುದೇ ಫೋನ್ ಟ್ಯಾಪಿಂಗ್ ಮಾಡುತ್ತಿಲ್ಲ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬಳಿ ನಿರ್ಧಿಷ್ಟವಾಗಿ ಏನಾದರೂ ದಾಖಲೆಗಳಿದ್ದರೆ ಕೊಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಈ ಕುರಿತು ಇಂದು ಮಾತನಾಡಿದ ಡಾ.ಜಿ.ಪರಮೇಶ್ವರ್, ಆ ರೀತಿಯ ಯಾವ ಫೋನ್ ಕದ್ದಲಿಕೆಯೂ ಆಗಿಲ್ಲ ಯಾರು ಫೋನ್ ಟ್ಯಾಪಿಂಗ್ ಆಗುತ್ತಿದೆ ಅಂತಾ ದಾಖಲೆ ಕೊಡಲಿ. ಕೇಂದ್ರ ಸಚಿವ ಹೆಚ್ ಡಿಕೆ ಮತ್ತು ಬಿಜೆಪಿ ಬಳಿ ದಾಖಲೆ ಇದ್ದರೆ ಕೊಡಲಿ. ಫೋನ್ ಕದ್ದಾಲಿಕೆ ಬಗ್ಗೆ ಏನಾದರೂ ದಾಖಲೆ ಇದ್ದರೆ ಕೊಡಲಿ ಎಂದು ಹೇಳಿದರು.
ಒಳಮೀಸಲಾತಿ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಖರ್ಗೆ ಜೊತೆ ನಿನ್ನೆ ಮಾತನಾಡಿದ್ದೇವೆ. ಒಳಮೀಸಲಾತಿ ಗೊಂದಲ ಬಗ್ಗೆ ಸಮಾಲೋಚಿಸಿದ್ದೇವೆ. ಎಲ್ಲಾ ರಾಜ್ಯಗಳಲ್ಲೂ ಒಳ ಮೀಸಲಾತಿ ಗೊಂದಲವಿದೆ ಇದನ್ನು ಹೊರತುಪಡಿಸಿ ಖರ್ಗೆ ಜತೆ ಬೇರೆ ಏನೂ ಚರ್ಚಿಸಿಲ್ಲ ಅಧಿಕಾರ ಗೊಂದಲ ಬಗ್ಗೆ ಖರ್ಗೆಯವರ ಜತೆ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.
Key words: Phone tapping, documents, Home Minister, Parameshwar







