Sunday, September 13, 2026

BDA Apartments

ಫೋನ್ ಕದ್ದಾಲಿಕೆ ಆರೋಪವೇ ಬೋಗಸ್- ಸಚಿವ ಎಂ.ಬಿ ಪಾಟೀಲ್ BDA JK_Adv BDA Adv
Home Front Page ಫೋನ್ ಕದ್ದಾಲಿಕೆ ಆರೋಪವೇ ಬೋಗಸ್- ಸಚಿವ ಎಂ.ಬಿ ಪಾಟೀಲ್

ಫೋನ್ ಕದ್ದಾಲಿಕೆ ಆರೋಪವೇ ಬೋಗಸ್- ಸಚಿವ ಎಂ.ಬಿ ಪಾಟೀಲ್

ಬೆಳಗಾವಿ,ಮಾರ್ಚ್,5,2026 (www.justkannada.in):  ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾಡಿರುವ ಫೋನ್ ಕದ್ದಾಲಿಕೆ ಆರೋಪವೇ ಬೋಗಸ್ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಫೋನ್ ಕದ್ದಾಲಿಕೆ ಆರೋಪವೇ ಬೋಗಸ್.  ರಾಜ್ಯ ಸರ್ಕಾರ ಯಾವುದೇ ಫೋನ್ ಕದ್ದಾಲಿಕೆ ಮಾಡುತ್ತಿಲ್ಲ ಎಂದರು.

ಅಲಮಟ್ಟಿ ಡ್ಯಾಂ ಎತ್ತರಕ್ಕೆ ಆಂಧ್ರ,  ತೆಲಂಗಾಣ ವಿರೋಧ ಸ್ವಾಭಾವಿಕ.  ಗೆಜೆಟ್ ನೋಟಿಫಿಕೇಸನ್ ಗೆ ಬಿಜೆಪಿ ಒತ್ತಾಯಿಸಬೇಕು. ಪ್ರಧಾನಿ ಮೋದಿ ಮುಂದೆ ಹೋಗಲು ಬಿಜೆಪಿ ಸಂಸದರು ಹೆದರುತ್ತಾರೆ ಎಂದು ಟೀಕಿಸಿದರು.

ಒಳಮೀಸಲಾತಿ ಜಟಾಪಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್,  ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡುತ್ತೇವೆ ಎಂದರು.

ಅಧಿಕಾರ ಹಂಚಿಕೆ ವಿಚಾರ, ಹೈಕಮಾಂಡ್ ನಿರ್ಧಾರ ಸಿಎಂ, ಡಿಸಿಎಂ ಒಪ್ಪುತ್ತೇವೆ ಎಂದಿದ್ದಾರೆ  ಹೀಗಾಗಿ ಸಮಸ್ಯೆ ಉದ್ಬವಿಸಲ್ಲ ಎಂದರು.

Key words: Phone tapping, allegations , bogus, Minister, M.B. Patil