Friday, August 28, 2026

BDA Apartments

Home Front Page ಕೊಟ್ಟ ಭರವಸೆ ಈಡೇರಿಸದ ಸರ್ಕಾರ: 3 ವರ್ಷವಾದ್ರೂ ಖಾಲಿ ಹುದ್ದೆ ಭರ್ತಿ ಮಾಡಿಲ್ಲ- ಶಾಸಕ ಅಶ್ವಥ್...

ಕೊಟ್ಟ ಭರವಸೆ ಈಡೇರಿಸದ ಸರ್ಕಾರ: 3 ವರ್ಷವಾದ್ರೂ ಖಾಲಿ ಹುದ್ದೆ ಭರ್ತಿ ಮಾಡಿಲ್ಲ- ಶಾಸಕ ಅಶ್ವಥ್ ನಾರಾಯಣ್

ಬೆಂಗಳೂರು,ಫೆಬ್ರವರಿ,26,2026 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕೊಟ್ಟಿದ್ದ ಭರವಸೆ ಈಡೇರಿಸಲ್ಲ. ಮೂರು ವರ್ಷವಾದರೂ ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನ ಭರ್ತಿ ಮಾಡಿಲ್ಲ ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಕಿಡಿಕಾರಿದರು.

ಖಾಲಿಹುದ್ದೆಗಳ ಭರ್ತಿಗೆ ಆಗ್ರಹಿಸಿ ವಿದ್ಯಾರ್ಥಿಗಳು ನಡೆಸಿ ಬೃಹತ್ ಹೋರಾಟ ಕುರಿತು ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಅಧಿಕಾರಕ್ಕೆ ಬರುವ ಮುನ್ನ ಹುದ್ದೆ ನೀಡುವ ಭರವಸೆ ಕೊಟ್ಟಿದ್ದರು.  ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದರು.  ಅಧಿಕಾರಕ್ಕೆ  ಬಂದು 3 ವರ್ಷ ಆದರೂ ಖಾಲಿ ಹುದ್ದೆಗಳ ಭರ್ತಿ ಮಾಡಿಲ್ಲ ಎಂದರು.

ಸರ್ಕಾರದ ನಡೆ ಉದ್ದೇಶ ಪೂರ್ವಕವಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಯುವಜನತೆಗೆ ಅನ್ಯಾಯವಾಗುತ್ತಿದೆ . ಯುವಕರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಯುವಕರ ಬೇಡಿಕೆ ಸರಿಯಾಗಿದೆ. ಸರ್ಕಾರ ಬೇಗ ಕ್ರಮ ಕೈಗೊಳ್ಳಲಿ ಎಂದು ಅಶ್ವತ್ ನಾರಾಯಣ್ ತಿಳಿಸಿದರು.

Key words: government, vacant posts, no filled, MLA, Ashwath Narayan