Thursday, October 15, 2026

Dasara Wishes

Strengthening DasraWishes_JK DasraWishes JK
Happy Dasara
Home Front Page ಅಧಿಕಾರ ಹಂಚಿಕೆ ವಿಚಾರ: ಏನೇ ಇದ್ರೂ ಹೈಕಮಾಂಡ್ ಕ್ಲೋಸ್ ಡೋರ್ ನಲ್ಲಿ ಚರ್ಚಿಸಬೇಕು- ಸಚಿವ ಪರಮೇಶ್ವರ್

ಅಧಿಕಾರ ಹಂಚಿಕೆ ವಿಚಾರ: ಏನೇ ಇದ್ರೂ ಹೈಕಮಾಂಡ್ ಕ್ಲೋಸ್ ಡೋರ್ ನಲ್ಲಿ ಚರ್ಚಿಸಬೇಕು- ಸಚಿವ ಪರಮೇಶ್ವರ್

ಬೆಂಗಳೂರು,ಫೆಬ್ರವರಿ,25,2026 (www.justkannada.in)  ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತ ವಿಚಾರ ಪದೇ ಪದೇ ಚರ್ಚೆಗೆ ಬರುತ್ತಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ , ಸಾರ್ವಜನಿಕವಾಗಿ ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ. ಏನೇ ಇದ್ದರೂ ಹೈಕಮಾಂಡ್ ಕ್ಲೋಸ್ ಡೋರ್ ನಲ್ಲಿ ಚರ್ಚಿಸಬೇಕು ಎಂದಿದ್ದಾರೆ.

ಅಧಿಕಾರ ಹಂಚಿಕೆ ವಿಚಾರದಲ್ಲಿ ಕೆಎನ್ ರಾಜಣ್ಣ ಹೇಳಿಕೆ ಬಗ್ಗೆ ಮಾತನನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅದರಲ್ಲಿ ಏನಾದರೂ ತಪ್ಪು ಇದೆಯಾ? ಸಾರ್ವನಿಕವಗಿ ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ. ಏನೇ ಇದ್ದರೂ ಹೈಕಮಾಂಡ್ ಕ್ಲೋಸ್ ಡೋರ್ ನಲ್ಲಿ ಚರ್ಚಿಸಬೇಕು ಇಲ್ಲ  ಅಂದರೆ ಸಿಎಲ್ ಪಿ ಸಭೆಯಲ್ಲಿ ಅಭಿಪ್ರಾಯ ಮಂಡಿಸಬೇಕು.ನಂತರ ಸಾಧಕ ಬಾಧಕ ಬಗ್ಗೆ ಚರ್ಚೆಯಾಗಬೇಕು ಎಂದರು.

ಪರಮೇಶ್ವರ್ ಮುಂದಿನ ಸಿಎಂ ಎಂಬ ಬೆಂಬಲಿಗರ ಘೋಷಣೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ನನ್ನ ಹೆಸರು ಕೂಗಿದ ತಕ್ಷಣ ಏನು ಆಗಲ್ಲ.  ಹೈಕಮಾಡ್ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ಬದ್ದ ನಿಮ್ಮ ಮುಂದೆ ಹೇಳಿಕೆ ನೀಡಿದರೆ ಸಿಎಂ ಆಗಲ್ಲ. 8 ವರ್ಷ ಅಧ್ಯಕ್ಷನಾಗಿದ್ದೆ ಸಾಮರ್ಥ್ಯ ಇಲ್ಲದೇ ಕೆಲಸ ಮಾಡಿದ್ದೀನಾ.  2 ಸಲ ಪಕ್ಷ ಅಧಿಕಾರಕ್ಕೆ ತಂದಿದ್ದೇನೆ.  ಸಾಮರ್ಥ್ಯ ಬಗ್ಗೆ ನನ್ನ ವಿಷಯದಲ್ಲಿ ಯಾರು ಪ್ರಶ್ನೆ ಮಾಡುವಂತಿಲ್ಲ ಎಂದು ಪರಮೇಶ್ವರ್ ತಿಳಿಸಿದರು.

Key words: Power sharing issue, high command, closed doors, Minister, Parameshwar