Saturday, October 10, 2026

Dasara Wishes

ಕೊರೋನಾ ವೈರಸ್ ಭೀತಿ ಹಿನ್ನೆಲೆ: ವಸತಿ ಶಾಲೆಗಳ 1ರಿಂದ 5ನೇ ತರಗತಿ ವಿದ್ಯಾರ್ಥಿಗ...
Happy Dasara
Home Crime ಮದುವೆ ಹೆಸರಲ್ಲಿ ಯುವಕನಿಗೆ 21.22 ಲಕ್ಷ ರೂ. ವಂಚಿಸಿದ ಯುವತಿ

ಮದುವೆ ಹೆಸರಲ್ಲಿ ಯುವಕನಿಗೆ 21.22 ಲಕ್ಷ ರೂ. ವಂಚಿಸಿದ ಯುವತಿ

ಬೆಂಗಳೂರು,ಫೆಬ್ರವರಿ,23,2026 (www.justkannada.in): ಯುವತಿಯೊಬ್ಬಳು ಯುವಕನಿಗೆ ಮದುವೆ ಹೆಸರಲ್ಲಿ ಕ್ರಿಪ್ಟೋದಲ್ಲಿ ಹೂಡಿಕೆ ಮಾಡಿಸಿ  21.22 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ದಾಸರಹಳ್ಳಿ ರಾಕೇಶ್ ವಂಚನೆಗೊಳಗಾದ ಯುವಕ. ಸಿರೀಶಾ ವಂಚನೆ ಮಾಡಿದ ಯುವತಿ. ರಾಕೇಶ್ ಮ್ಯಾಟ್ರಿಮೋನಿಯಲ್ಲಿ ಮದುವೆಗೆ ವಧುವನ್ನು ಹುಡುಕುತ್ತಿದ್ದರು. ಈ ವೇಳೆ ಸಿರೀಶಾ ಪರಿಚಯವಾಗಿದ್ದು ನಂತರ ಸ್ನೇಹಿತರಾಗಿದ್ದರು.

ಇದಾದ ಬಳಿಕ ಸಿರೀಶ ಮದುವೆಯಾಗೋಣ ಎಂದು ಹೇಳಿ ಯುವಕ ರಾಕೇಶ್ ಗೆ ಕ್ರಿಪ್ಟೋದಲ್ಲಿ ಹೂಡಿಕೆ ಮಾಡಲು ತಿಳಿಸಿದ್ದಾಳೆ. ಈ ವೇಳೆ ರಾಕೇಶ್ ಗೆ ವೆಬ್ ಸೈಟ್ ಲಿಂಕ್  ಬ್ಯಾಂಕ್ ಖಾತೆ ನೀಡಿ ಹಣ ಹಾಕಿಸಿಕೊಂಡಿದ್ದಾಳೆ. ಮೊದಲು ಲಾಭದ ಆಮಿಷ ತೋರಿ ನಂತರ ಹಣ ಡ್ರಾ ಮಾಡಲು ಕಮಿಷನ್ ನೀಡಬೇಕೆಂದು ಹಂತ ಹಂತವಾಗಿ ರಾಕೇಶ್ ನಿಂದ 21.22 ಲಕ್ಷ ರೂ ಹಣ ಹಾಕಿಸಿಕೊಂಡು ಲಾಭವನ್ನೂ ನೀಡದೇ ಹಣವನ್ನು ನೀಡದೆ ವಂಚನೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ಈ ಕುರಿತು ಉತ್ತರ ವಿಭಾಗದ ಸೆನ್ ಪೊಲೀಸ್ ಠಾಣೆಗೆ ರಾಕೇಶ್ ದೂರು ನೀಡಿದ್ದಾರೆ.

Key words: Young woman, cheats, young man, marriage