Saturday, October 10, 2026

Dasara Wishes

Happy Dasara
Home Crime  ಅವೈಜ್ಞಾನಿಕ ಹಂಪ್ ಗೆ ವಿದ್ಯಾರ್ಥಿನಿ ಬಲಿ

 ಅವೈಜ್ಞಾನಿಕ ಹಂಪ್ ಗೆ ವಿದ್ಯಾರ್ಥಿನಿ ಬಲಿ

ಹಾಸನ,ಫೆಬ್ರವರಿ,23,2026 (www.justkannada.in):  ಅವೈಜ್ಞಾನಿಕ ಹಂಪ್ ನಿಂದಾಗಿ ಬೈಕ್ ನಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಂತಿಮ ವರ್ಷದ ಎಂಸಿಎ ವಿದ್ಯಾರ್ಥಿನಿ ಪ್ರಿಯಾ ಮೃತಪಟ್ಟವರು.  ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅವೈಜ್ಞಾನಿಕ ಹಂಪ್ ನಿಂದಾಗಿ ಬೈಕ್ ನಿಂದ ಬಿದ್ದು ವಿದ್ಯಾರ್ಥಿನಿ ಪ್ರಿಯಾ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ರಸ್ತೆಯಲ್ಲಿ ಹಂಪ್ ಹಾಕಿದ್ರೂ ಸೂಚನಾ ಫಲಕ ಹಾಕಿಲ್ಲ ಹಂಪ್ ಗಳ ಮೇಲೆ ಬಿಳಿಪಟ್ಟಿಗಳನ್ನೇ ಬರೆದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿನಿ ಬಲಿಯಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Student, falls, unscientific hump, death