ಮೈಸೂರು: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣು

ಮೈಸೂರು,ಫೆಬ್ರವರಿ,20,2026 (www.justkannada.in): ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಸರಸ್ವತಿಪುರಂನಲ್ಲಿ ಈ ಘಟನೆ ನಡೆದಿದೆ ಸಂಧ್ಯಾ(46) ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರವಾಸಕ್ಕೆ ತೆರಳಲು ಪತಿ ಅನುಮತಿ ನೀಡದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

ನಿನ್ನೆ ರಾತ್ರಿ ಪ್ರವಾಸದ ವಿಚಾರದಲ್ಲಿ ಸಂಧ್ಯಾ ಮತ್ತು ಪತಿ ನಡುವೆ ಜಗಳವಾಗಿದೆ. ಈ ಮಧ್ಯೆ ಪತಿ ಹೊರಗೆ ಹೋದಾಗ ಸಂಧ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿದ್ದಾರೆ.

Key words: Mysore, Housewife, suicide