Saturday, October 10, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page CS ಶಾಲಿನಿ ರಜನೀಶ್ ‍ಗೆ ಲಂಚ ನೀಡಿ ಡಿ.ಬಿ ನಟೇಶ್ ಮುಂಬಡ್ತಿ ಪಡೆದಿದ್ದಾರೆ- ಸ್ನೇಹಮಯಿ ಕೃಷ್ಣ...

CS ಶಾಲಿನಿ ರಜನೀಶ್ ‍ಗೆ ಲಂಚ ನೀಡಿ ಡಿ.ಬಿ ನಟೇಶ್ ಮುಂಬಡ್ತಿ ಪಡೆದಿದ್ದಾರೆ- ಸ್ನೇಹಮಯಿ ಕೃಷ್ಣ ಹೊಸಬಾಂಬ್

ಬೆಂಗಳೂರು,ಫೆಬ್ರವರಿ,17,2026 (www.justkannada.in): ಮುಡಾ ಸೈಟ್ ಹಗರಣ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು,  ಸಿಎಸ್ ಶಾಲಿನಿ ರಜನೀಶ್ ಮತ್ತು ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ವಿರುದ್ದ  ಸ್ನೇಹಮಯಿ ಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಜ್ಯ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ  ಲಂಚ ನೀಡಿ ಡಿಬಿ ನಟೇಶ್ ಮುಂಬಡ್ತಿ ಪಡೆದಿದ್ದಾರೆ. ಶಾಲಿನಿ ರಜನೀಶ್ ಅವರಿಗೆ 1 ಕೋಟಿ  60 ಲಕ್ಷ ರೂ ನೀಡಿದ್ದಾರೆ. ಫೆಬ್ರವರಿ 9 ರಂದೇ ನನಗೆ ಇದರ ಬಗ್ಗೆ ಮಾಹಿತಿ ಇತ್ತು ಎಂದಿದ್ದಾರೆ.

ಹಣ ನೀಡಿದ ಕೆಲವೇ ದಿನಗಳಲ್ಲಿ ಡಿಬಿ ನಟೇಶ್ ಗೆ  ಮುಂಬಡ್ತಿ ನೀಡಲಾಗಿದೆ. ಈ ಬಗ್ಗೆ ಸ್ಪಷ್ಟೀಕರಣವನ್ನ ಕೋರಿ ಶಾಲಿನಿ ರಜನೀಶ್ ಗೆ ಪತ್ರ ಬರೆಯಲಾಗಿದೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

Key words:  DB Natesh, promoted, bribe, CS Shalini Rajneesh, Snehamayi Krishna