Saturday, August 15, 2026

BDA Apartments

Home Front Page ರೈತರ ಆತ್ಮಹತ್ಯೆ, ಸರ್ಕಾರಿ ಹುದ್ದೆಗಳ ನೇಮಕಾತಿ ಇಲ್ಲ: ‘ಕೈ’ ಸರ್ಕಾರದ ಸಮಾವೇಶಕ್ಕೆ ಕುಟುಕಿದ JDS

ರೈತರ ಆತ್ಮಹತ್ಯೆ, ಸರ್ಕಾರಿ ಹುದ್ದೆಗಳ ನೇಮಕಾತಿ ಇಲ್ಲ: ‘ಕೈ’ ಸರ್ಕಾರದ ಸಮಾವೇಶಕ್ಕೆ ಕುಟುಕಿದ JDS

ಹಾವೇರಿ,ಫೆಬ್ರವರಿ,14,2026 (www.justkannada.in):  ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದ್ದು, ಜನ ವಿರೋಧಿ ಕಾಂಗ್ರೆಸ್ ಸರ್ಕಾರದ “ನಿರರ್ಥಕ 1000 ದಿನಗಳ” ಪಟ್ಟಿಯನ್ನ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಸಮಾವೇಶಕ್ಕೆ  ಜೆಡಿಎಸ್ ಘಟಕ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಟ್ವಿಟ್ ಮಾಡಿರುವ ಜೆಡಿಎಸ್, ಕರ್ನಾಟಕದ ಜನರ “ಪ್ರತಿನಿತ್ಯದ ಸಾವಿರಾರು ಸಮಸ್ಯೆ”ಗಳ ಮಧ್ಯೆ ಕಾಂಗ್ರೆಸ್ ರಾಕ್ಷಸರ ದುರಾಡಳಿತಕ್ಕೆ ಸಾವಿರ ದಿನದ ಸೂತಕ. ಜನ ವಿರೋಧಿ ಕಾಂಗ್ರೆಸ್ ಸರ್ಕಾರದ “ನಿರರ್ಥಕ 1000 ದಿನಗಳ” ಪಟ್ಟಿ.

ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್- 1

ರಾಜ್ಯದಲ್ಲಿ 2800ಕ್ಕೂ ಹೆಚ್ಚು ರೈತರ ಆತ್ಮಹತ್ಯೆ

2.80 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರು ನೇಮಕಾತಿ ಇಲ್ಲ

ಬಾಕಿ ಹಣ ನೀಡದೆ ಗುತ್ತಿಗೆದಾರರಿಗೆ ಆತ್ಮಹತ್ಯೆ ಭಾಗ್ಯ

ಸರ್ಕಾರದ ಕಿರುಕುಳಕ್ಕೆ ಅಧಿಕಾರಿಗಳ ಸರಣಿ ಆತ್ಮಹತ್ಯೆ

ರಸ್ತೆ ಗುಂಡಿ ಅಪಘಾತಕ್ಕೆ ಅಮಾಯಕರು ಬಲಿ

ದಲಿತರ 25,000 ಸಾವಿರ ಕೋಟಿ ದುರ್ಬಳಕೆ

ಅಬಕಾರಿ ಇಲಾಖೆಯಲ್ಲಿ6000 ಕೋಟಿ ಹಗರಣ‌

ಗೃಹಲಕ್ಷ್ಮಿ ಹಣ 5 ಸಾವಿರ ಕೋಟಿ ಗುಳುಂ

ಅನ್ನಭಾಗ್ಯ ಅಕ್ಕಿ ಹಣ 657 ಕೋಟಿ ಲೂಟಿ

ಕಾರ್ಮಿಕ ಇಲಾಖೆ ಕಿಟ್‌ ಹಗರಣ

ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಲೂಟಿ

ಬಹುಕೋಟಿ ಮುಡಾ ಹಗರಣ

ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ

ಪೆಟ್ರೋಲ್, ಡಿಸೇಲ್ ದರ ಹೆಚ್ಚಳ

ಮೆಟ್ರೋ, ಬಸ್ ದರ ಏರಿಕೆ

ಕಸಕ್ಕೂ ತೆರಿಗೆ ,ನೀರು, ಹಾಲು ಸ್ಟ್ಯಾಂಪ್ ಶುಲ್ಕ ಹೆಚ್ಚಳ

ರೈತರಿಗೆ ಗೊಬ್ಬರವಿಲ್ಲ , ನೆರೆ- ಬೆಳೆ ನಷ್ಟ ಪರಿಹಾರವಿಲ್ಲ

1.6 ಲಕ್ಷ ಒಬಿಸಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌’ಗೆ ಕೊಕ್ಕೆ

ಯುವಕರಿಗೆ ಯುವನಿಧಿ ನೀಡದೆ ಮೋಸ

ಇ-ಖಾತಾ, ಪೋಡಿ, ಪೋತಿ ಅಭಿಯಾನ ವಿಫಲ

ಬಡವರ ಜನೌಷಧ ಕೇಂದ್ರ‌ ಸ್ಥಗಿತ

ಇಲಾಖಾವಾರು ವರ್ಗಾವಣೆ ದಂಧೆ

ರಾಜ್ಯದಲ್ಲಿ ಗಾಂಜಾ, ಡ್ರಗ್ಸ್‌ ದಂಧೆ ಹೆಚ್ಚಳ

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ

ಹದಗೆಟ್ಟ ಕಾನೂನು ಸುವ್ಯವಸ್ಥೆ

ಸರ್ಕಾರಿ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತರು, ಗ್ರಂಥಪಾಲಕರಿಗೆ ಸಂಬಳ ಇಲ್ಲ.

ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿದರಷ್ಟೇ ಕರ್ನಾಟಕಕ್ಕೆ ಬರುವುದು ಒಳ್ಳೆಯ ದಿನ ಎಂದು ಜೆಡಿಎಸ್ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದೆ.

Key words: Congress government,  Thousand day, JDS