RCB ಪಂದ್ಯಕ್ಕೆ ಅನುಮತಿ: ಪ್ರೇಕ್ಷಕರ ಸುರಕ್ಷತೆಗೆ ಪ್ರಮುಖ ಆದ್ಯತೆ -ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು ,ಫೆಬ್ರವರಿ,13,2026 (www.justkannada.in):  ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ ಸಿಬಿ ಪಂದ್ಯವಾಡಲು ನಿನ್ನ ನಡೆದ  ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಅನುಮತಿ ನೀಡಿದ್ದು ಈ ಕುರಿತು ಮಾತನಾಡಿರುವ ಗೃಹ ಸಚಿವ ಜಿ ಪರಮೇಶ್ವರ್ ಅವರು, ಪ್ರೇಕ್ಷಕರ ಸುರಕ್ಷತೆಗೆ ಪ್ರಮುಖ ಆದ್ಯತೆ ಕೊಡಬೇಕು ಎಂದು  ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಪಂದ್ಯ ಆರಂಭಕ್ಕೂ ಮುನ್ನ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಸಮಯ ನೀಡಿ ಪಂದ್ಯಗಳು ಆರಂಭ ಮಾಡುವುದಕ್ಕೆ ಮುಂಚೆ ಇಂತಹ ಕ್ರಮಗಳು ಆಗಬೇಕು. ನ್ಯಾಯಮೂರ್ತಿ ಕುನ್ಹಾ ಅವರ ಶಿಫಾರಸುಗಳು ಅನುಷ್ಠಾನ ಆಗಬೇಕು ಸಂಭ್ರಮಾಚರಣೆಗೆ ಅನುಮತಿ ನೀಡುವ ಬಗ್ಗೆ ಯೋಚಿಸುತ್ತೇವೆ ಎಂದು ತಿಳಿಸಿದರು.

ಇದಕ್ಕಾಗಿ ಈಗಾಗಲೇ ಒಂದು ಸಮಿತಿ ರಚನೆ ಮಾಡಲಾಗಿದ್ದು,  ಅದರಲ್ಲಿ ಜಿಬಿಎ ಚೀಫ್ ಕಮಿಷನರ್ ಮಹೇಶ್ವರರಾವ್ ಹಾಗೂ ಪೊಲೀಸ್ ಕಮಿಷನರ್ ಸೀಮಂತ ಕುಮಾರ್ ಸಿಂಗ್ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆ ಗಳನ್ನು ಸೇರಿಸಿ ಒಂದು ಸಮಿತಿ ಮಾಡಲಾಗಿದೆ. ಒಂದಕ್ಕಿಂತ ನಾಲ್ಕರಷ್ಟು ಹೆಚ್ಚಿನ ಭದ್ರತೆ ನೀಡಲಾಗುತ್ತದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.

Key words: Permission, RCB, match, Safety, Home Minister, G. Parameshwar