ಶಿವಮೊಗ್ಗ,ಫೆಬ್ರವರಿ,12,2026 (www.justkannada.in): ಸಿಎಂ ಬದಲಾವಣೆ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿಲು ಕಂದಾಯ ಸಚಿವ ಕೃಷ್ಣ ಭೈರೇಗೌಡ ನಿರಾಕರಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಸಿಎಂ ಸ್ಥಾನದ ಬಗ್ಗೆ ಸಾರ್ವಜನಿಕವಗಿ ಚರ್ಚೆ ಮಾಡಲ್ಲ. ಚರ್ಚೆಗೆ ಹೊಸ ವ್ಯಾಖ್ಯಾನ ಸೇರಿಸಲು ನನ್ನ ಹತ್ತಿರ ಏನು ಇಲ್ಲ. ಬೇರೆಯವರ ಹೇಳಿಕೆಗೆ ನಾನು ಯಾಕೆ ಪ್ರತಿಕ್ರಿಯಿಸಬೇಕು ಇನ್ನೊಬ್ಬರ ಹೇಳಿಕೆಗೆ ಪ್ರತಿಕ್ರಿಯಿಸಿದರೇ ನನ್ನತನ ಏನು ಉಳಿಯುತ್ತೆ ಎಂದು ಮಾಧ್ಯಮಗಳಿಗೆ ಕುಟುಕಿದರು.
ಹಾಗೆಯೇ ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ದೆಹಲಿ ಪ್ರವಾಸದ ಬಗ್ಗೆ ನಾನು ಏನು ಮಾತನಾಡುವುದಿಲ್ಲ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
Key words: Minister, Krishna Bhairegowda, CM change







