ಬೆಂಗಳೂರು,ಫೆಬ್ರವರಿ,12,2026 (www.justkannada.in): ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಇದು ಹೆಚ್ಚು ಚರ್ಚೆ ಮಾಡೋ ವಿಷಯ ಅಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಸಿಎಂ ಬದಲಾವಣೆ, ಡಿಕೆ ಶಿವಕುಮಾರ್ ಭೇಟಿ ವಿಚಾರ ಕುರಿತು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಸಿಎಂ ಮತ್ತು ಡಿಸಿಎಂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಇದು ಹೆಚ್ಚು ಚರ್ಚೆ ಮಾಡುವ ವಿಷಯ ಅಲ್ಲ. ನಮ್ಮ ಹೈಕಮಾಂಡ್ , ಖರ್ಗೆ, ರಾಹುಲ್ ಗಾಂಧಿ ಇದ್ದಾರೆ ಅವರು ಮುಂದೆ ಏನ್ ನಿರ್ಧಾರ ಮಾಡ್ತಾರೆ ನೋಡೋಣ ಎಂದರು.
ಕೆಲ ಶಾಸಕರ ವಿದೇಶ ಪ್ರವಾಸ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್ ಸಿ ಮಹದೇವಪ್ಪ, ಶಾಸಕರು ಪ್ರವಾಸಕ್ಕೆ ಹೋಗುವುದು ತಪ್ಪಾ? ದೇಶ ಸುತ್ತಿ ಕೋಶ ಓದಿ ಅಂತಾರೆ ಇಲ್ಲೆ ಕೂತರೆ ಹೇಗೆ? ವೆಂಕಟೇಶ್ ಹೇಳಿಕೆ ಗಮನಿಸಿದ್ದೇನೆ ನಮ್ಮ ಇಲಾಖೆಗೂ ಪ್ರವಾಸಕ್ಕೂ ಸಂಬಂಧವಿಲ್ಲವೆಂದು ಹೇಳಿದ್ದಾರೆ ಪ್ರವಾಸಕ್ಕೆ ಸರ್ಕಾರ ಪಾರ್ಟಿ ವ್ಯವಸ್ಥೆ ಮಾಡಿದರೆ ಬೇರೆ. ಸ್ವಂತ ಖರ್ಚಿನಲ್ಲಿ ಪ್ರವಾಸಕ್ಕೆ ಹೋದರೆ ಯಾಕೆ ಪ್ರಶ್ನೆ ಮಾಡಬೇಕು ಇದು ಚರ್ಚೆ ವಿಷಯವಲ್ಲ ಎಂದು ತಿಳಿಸಿದರು.
Key words: Power sharing, issue, Minister, Mahadevappa







