Sunday, September 13, 2026

BDA Apartments

ನನ್ನ ಇಲಾಖೆಯಿಂದ ಶಾಸಕರ ವಿದೇಶ ಪ್ರವಾಸ ಆಯೋಜನೆ ಮಾಡಿಲ್ಲ-ಸಚಿವ ವೆಂಕಟೇಶ್ BDA JK...
Home Front Page ನನ್ನ ಇಲಾಖೆಯಿಂದ ಶಾಸಕರ ವಿದೇಶ ಪ್ರವಾಸ ಆಯೋಜನೆ ಮಾಡಿಲ್ಲ-ಸಚಿವ ವೆಂಕಟೇಶ್

ನನ್ನ ಇಲಾಖೆಯಿಂದ ಶಾಸಕರ ವಿದೇಶ ಪ್ರವಾಸ ಆಯೋಜನೆ ಮಾಡಿಲ್ಲ-ಸಚಿವ ವೆಂಕಟೇಶ್

ಬೆಂಗಳೂರು,ಫೆಬ್ರವರಿ,12,2026 (www.justkannada.in):  ಪಶುಸಂಗೋಪನಾ ಇಲಾಖೆ ವತಿಯಿಂದ ಶಾಸಕರಿಗೆ ವಿದೇಶ ಪ್ರವಾಸ ಆಯೋಜನೆ ಮಾಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಕೆ.ವೆಂಕಟೇಶ್, ನಮ್ಮ ಇಲಾಖೆ ವತಿಯಿಂದ ಪ್ರವಾಸ ಆಯೋಜನೆ ಮಾಡಿಲ್ಲ. ಪ್ರವಾಸಕ್ಕೆ ನನಗೂ ಆಹ್ವಾನವಿತ್ತು. ಆದರೆ ನಾನು ಹೋಗುತ್ತಿಲ್ಲ. ನಾನೇ ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ ಎಂದರು.

ಕೆಲ ಹಿರಿಯ ಶಾಸಕರು ವಿದೇಶ ಪ್ರವಾಸಕ್ಕೆ ಹೋಗುತ್ತಿರುವುದು ನಿಜ.  ಆದರೆ ನನ್ನ ಇಲಾಖೆಯಿಂದ ಆಯೋಜನೆಯಾದ ಪ್ರವಾಸವಲ್ಲ ಪಶುಸಂಗೋಪನೆ ಇಲಾಖೆಗೂ ಈ ಪ್ರವಾಸಕ್ಕೂ ಸಂಬಂಧವಿಲ್ಲ ಎಂದು ಸಚಿವ ಕೆ.ವೆಂಕಟೇಶ್  ಸ್ಪಷ್ಟಪಡಿಸಿದ್ದಾರೆ.

Key words: My department, not organized, foreign trips, MLAs, Minister, Venkatesh