ಬೆಂಗಳೂರು,ಫೆಬ್ರವರಿ,10,2026 (www.justkannada.in): ರಾಜ್ಯದಲ್ಲಿ ಮತ್ತೆ ಸಿಎಂ ಕುರ್ಚಿ ವಿಚಾರ ಚರ್ಚೆಯಾಗುತ್ತಿದ್ದು ತಮ್ಮ ತಮ್ಮ ನಾಯಕರ ಪರ ಬೆಂಬಲಿತ ಶಾಸಕರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಆರ್.ವಿ ದೇಶಪಾಂಡೆ, ವಿಳಂಬ ಮಾಡದೇ ಹೈಕಮಾಂಡ್ ತನ್ನ ನಿರ್ಣಯ ಹೇಳಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಒಂದು ನಿರ್ಣಯ ಮಾಡಬಹುದಿತ್ತು ಅನ್ನಿಸುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡೇ ಅಂತಿಮ ಅಂತಾ ಹೇಳಿದ್ದಾರೆ. ಹೀಗಾಗಿ ಸಿಎಂ ಬದಲಾವಣೆ ಕುರಿತು ವಿಳಂಬ ಮಾಡದೇ ಹೈಕಮಾಂಡ್ ತಮ್ಮ ನಿರ್ಣಯ ತಿಳಿಸಲಿ ಎಂದು ಆಗ್ರಹಿಸಿದರು.
Key words: high command, Power Sharing, MLA, RV Deshpande







