Saturday, October 17, 2026

Dasara Wishes

Happy Dasara
Home Front Page ವ್ಯಂಗ್ಯಚಿತ್ರಗಳ ಮೊನಚನ್ನು ಉಳಿಸಿಕೊಳ್ಳೋಣ: ಜಿ ಎನ್ ಮೋಹನ್

ವ್ಯಂಗ್ಯಚಿತ್ರಗಳ ಮೊನಚನ್ನು ಉಳಿಸಿಕೊಳ್ಳೋಣ: ಜಿ ಎನ್ ಮೋಹನ್

Caricatures, which were once described as people's editorials, are losing their edge, lamented writer and journalist G N Mohan. He was speaking at the inauguration of the annual cartoon exhibition organized by the Karnataka Cartoonists' Association at the Indian Institute of World Culture in Bengaluru today

 

ಬೆಂಗಳೂರು: ಜನರ ಸಂಪಾದಕೀಯ ಎಂದೇ ಬಣ್ಣಿಸಲ್ಪಟ್ಟಿದ್ದ ವ್ಯಂಗ್ಯ ಚಿತ್ರಗಳು ತಮ್ಮ ಮೊನಚು ಕಳೆದುಕೊಳ್ಳುತ್ತಿವೆ ಎಂದು ಸಾಹಿತಿ, ಪತ್ರಕರ್ತ ಜಿ ಎನ್ ಮೋಹನ್ ಅವರು ವಿಷಾದಿಸಿದರು.

ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಇಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವ್ಯಂಗ್ಯಚಿತ್ರ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವ್ಯಂಗ್ಯಚಿತ್ರಗಳು ಜನಸಾಮಾನ್ಯರ ಮನಸ್ಸನ್ನು ಬಿಂಬಿಸುವ ಕನ್ನಡಿಯಾದ ಕಾರಣದಿಂದಲೇ ಅದನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಆಳುವ ವರ್ಗ ಸದಾ ಯತ್ನಿಸುತ್ತಲೇ ಇರುತ್ತದೆ. ಈಗಾಗಲೇ ವ್ಯಂಗ್ಯಚಿತ್ರಗಳನ್ನು ಕೇವಲ ಚಿತ್ರವಾಗಿಸುವ ಹುನ್ನಾರ ನಡೆದಿದೆ. ಇದನ್ನು ಅರಿತುಕೊಂಡು ಜನ ಸಾಮಾನ್ಯರ ದನಿಯಾಗಿಯೇ ವ್ಯಂಗ್ಯಚಿತ್ರಗಳು ಉಳಿಯಬೇಕು ಎಂದರು.

ಇಂದು ವ್ಯಂಗ್ಯಚಿತ್ರಗಳನ್ನು ಬಿಟ್ಟ ಜಾಗವನ್ನು ತುಂಬುವ ಪದಾರ್ಥದಂತೆ ಬಳಸಲಾಗುತ್ತಿರುವುದು ದುರದೃಷ್ಟಕರ. ಒಂದು ಕಾಲಕ್ಕೆ ಇಡೀ ದೇಶ ಕರ್ನಾಟಕದ ವ್ಯಂಗ್ಯಚಿತ್ರಕಾರರತ್ತ ತಿರುಗಿ ನೋಡುವಂತೆ ಈ ನೆಲ ಉತ್ತಮ ವ್ಯಂಗ್ಯಚಿತ್ರಕಾರರನ್ನು ಕೊಟ್ಟಿದೆ ಎಂದರು.

ಪ್ರದರ್ಶನವನ್ನು ಉದ್ಘಾಟಿಸಿದ ಹಿರಿಯ ವ್ಯಂಗ್ಯಚಿತ್ರಕಾರರಾದ ಪಾಂಡುರಂಗ ರಾವ್ ಅವರು ಮಾತನಾಡಿ ವ್ಯಂಗ್ಯಚಿತ್ರಕಾರರ ಸಂಘ ನಡೆದು ಬಂದ ಹಾದಿಯನ್ನು ಬಣ್ಣಿಸಿದರು.

ವ್ಯಂಗ್ಯಚಿತ್ರಗಳ ಮೊನಚನ್ನು ಉಳಿಸಿಕೊಳ್ಳೋಣ: ಜಿ ಎನ್ ಮೋಹನ್ gnm ಕರ್ನಾಟಕ ಪ್ರಕಾಶಕರ ಸಂಘದ ವಾರ್ಷಿಕ ವ್ಯಂಗ್ಯಚಿತ್ರ ಪ್ರದರ್ಶನವನ್ನು ಉದ್ದೇಶಿಸಿ ಹಿರಿಯ ಪತ್ರಕರ್ತ, ಸಾಹಿತಿ ಜಿ ಎನ್ ಮೋಹನ್ ಅವರು ಮಾತನಾಡಿದರು. ಚಿ...
ಕರ್ನಾಟಕ ಪ್ರಕಾಶಕರ ಸಂಘದ ವಾರ್ಷಿಕ ವ್ಯಂಗ್ಯಚಿತ್ರ ಪ್ರದರ್ಶನವನ್ನು ಉದ್ದೇಶಿಸಿ ಹಿರಿಯ ಪತ್ರಕರ್ತ, ಸಾಹಿತಿ ಜಿ ಎನ್ ಮೋಹನ್ ಅವರು ಮಾತನಾಡಿದರು. ಚಿತ್ರದಲ್ಲಿ ಹಿರಿಯ ವ್ಯಂಗ್ಯಚಿತ್ರಕಾರರಾದ ಪಾಂಡುರಂಗ ರಾವ್, ಮಂಜುನಾಥ್, ನಂಜುಂಡಸ್ವಾಮಿ, ಜೇಮ್ಸ್ ವಾಜ್, ರಾಮಧ್ಯಾನಿ, ಗುಜ್ಜಾರ್, ವಿ ಆರ್ ಸಿ ಶೇಖರ್ ಇದ್ದಾರೆ.

ಅಧ್ಯಕ್ಷತೆ ವಹಿಸಿದ್ದ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷರಾದ ನಂಜುಂಡಸ್ವಾಮಿ ಅವರು ಮಾತನಾಡಿ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಯುವ ತಲೆಮಾರು ಹೆಚ್ಚಿನ ಆಸಕ್ತಿ ವಹಿಸಲು ಸಾಧ್ಯವಾಗುವಂತೆ ವ್ಯಂಗ್ಯ ಚಿತ್ರ ಪ್ರದರ್ಶನ, ಸಂಕಿರಣ, ಕಮ್ಮಟಗಳನ್ನು ಆಯೋಜಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಹಿರಿಯ ವ್ಯಂಗ್ಯ ಚಿತ್ರಕಾರರಾದ ಗುಜ್ಜಾರ್ ಹಾಗೂ ವಿ ಆರ್ ಸಿ ಶೇಖರ್, ರಾಮಧ್ಯಾನಿ, ಎಚ್. ಬಿ. ಮಂಜುನಾಥ್. ಜೇಮ್ಸ್ ವಾಜ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಜಿ ಎಸ್ ನಾಗನಾಥ್, ಸಂಕೇತ ಗುರುದತ್ತ, ಎಂ. ವಿಶ್ವನಾಥ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

key words: preserve, the spirit, cartoons, G N Mohan

ವ್ಯಂಗ್ಯಚಿತ್ರಗಳ ಮೊನಚನ್ನು ಉಳಿಸಿಕೊಳ್ಳೋಣ jk02_new jk02 new

SUMMARY:

Let’s preserve the spirit of cartoons: G N Mohan

ಜಿ ಎನ್ ಮೋಹನ್ mohan mohan 1

Caricatures, which were once described as people’s editorials, are losing their edge, lamented writer and journalist G N Mohan. He was speaking at the inauguration of the annual cartoon exhibition organized by the Karnataka Cartoonists’ Association at the Indian Institute of World Culture in Bengaluru today.