ಬೆಂಗಳೂರು,ಫೆಬ್ರವರಿ,4,2026 (www.justkannada.in): ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆ ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ವಿರುದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಸದನದಲ್ಲೇ ಏಕವಚನದಲ್ಲೇ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ವಿರುದ್ದ ಕೆಂಡಕಾರಿದ ಶಾಸಕ ಕೆ.ಎಂ ಶಿವಲಿಂಗೇಗೌಡ, ನಿಮಗೆ ಏನಾದರೂ ಮಾನ ಮರ್ಯಾದೆ ಇದೆಯಾ? ಇದು ಅಸೆಂಬ್ಲಿನಾ ಅಥವಾ ಡ್ಯಾನ್ಸ್ ಮಾಡೋಕೆ ಬಂದಿದ್ದೀರಾ? ನಾವು ಧರಣಿ ಮಾಡುತ್ತೇವೆ ಆದರೆ ಈ ರೀತಿಯಾಗಿ ಮಾಡಿಲ್ಲ. ನಿಮ್ಮತರ ಕೆಟ್ಟ ಜನರನ್ನ ನಾನು ಎಲ್ಲಿಯೂ ನೋಡಿಲ್ಲ. ಲೇ ಅರೆಸ್ಸೆಸ್ಸು.. ಆರೆಸ್ಸೆಸ್ಸು.. ಥೂ ನಿಮ್ ಯೋಗ್ಯತೆಗೆ ಬೆಂಕಿ ಹಾಕಾ..? ಎಂದು ಜಾಡಿಸಿದರು.
ಹಾಗೆಯೇ ಬಿಜೆಪಿ ಶಾಸಕ ಶರಣು ಸಲಗರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಶಿವಲಿಂಗೇಗೌಡ, ನಿನಗೆ ಮಾನ ಮರ್ಯಾದೆ ಇದೆಯಾ ಕೋತಿ ಬಡ್ಕೊಂಡಂಗೆ ಬಡ್ಕೋತಿಯಾ. ನೀವು ಕೋತಿ ಆಟ ಆಡೋಕೆ ಹೋಗಬೇಕು. ನಿನ್ನ ಹೆಂಡತಿನ ತಹಶೀಲ್ದಾರ್ ಮಾಡಿ ದುಡ್ಡು ಹೊಡೆದಿದ್ದೀಯಾ. ನಿನಗೆ ಮಾನ ಮರ್ಯಾದೆ ಇದೆಯಾ ಎಂದು ಏಕವಚನದಲ್ಲೇ ಗುಡುಗಿದರು.
ರಾಜ್ಯಪಾಲರು ಕಾನೂನಿಗೆ ತಡೆ ಹಿಡಿದಿದ್ದಾರೆ. ಇಲ್ಲದಿದ್ದರೇ ನಿಮಗೆ ಒಂದ್ ಗತಿ ಕಾಣಿಸುತ್ತಿದ್ದೆ. ರಾಜ್ಯಪಾಲರು ಜಾರಿಗೆ ಕೊಡಬೇಕಿತ್ತು ಎಂದು ಹರಿಹಾಯ್ದರು.
Key words: Congress MLA, Shivalingegowda , BJP , Session







