Thursday, August 6, 2026

BDA Apartments

Home Front Page ವಿಪಕ್ಷಗಳ ಅಹೋರಾತ್ರಿ ಧರಣಿ: ಮನ್ ರೇಗಾ ವಿಚಾರ ಡೈವರ್ಟ್ ಗಾಗಿ ಯತ್ನ- ಸಚಿವ ಎಂ.ಬಿ ಪಾಟೀಲ್

ವಿಪಕ್ಷಗಳ ಅಹೋರಾತ್ರಿ ಧರಣಿ: ಮನ್ ರೇಗಾ ವಿಚಾರ ಡೈವರ್ಟ್ ಗಾಗಿ ಯತ್ನ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಫೆಬ್ರವರಿ,4,2026 (www.justkannada.in):  ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಸಚಿವ ಆರ್.ಬಿ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಅಹೋರಾತ್ರಿ ಧರಣಿ ನಡೆಸುತ್ತಿರುವ ಕುರಿತು ಕೈಗಾರಿಕಾ ಇಲಾಖೆ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್,  ಮನ್ ರೇಗಾ ಯೋಜನೆ  ದೃಷ್ಟಿ ಬೇರೆ ಕಡೆ ಸೆಳೆಯಲು ಬಿಜೆಪಿ, ಜೆಡಿಎಸ್  ಯತ್ನಿಸುತ್ತಿವೆ.  ಅಬಕಾರಿ ಸಚಿವರು ಹಣ ತೆಗೆದುಕೊಂಡಿದ್ದಾರಾ? ಯಾರೋ ದುಡ್ಡು ತಿಂದು ತಿಮ್ಮಾಪುರ ಹೆಸರು ಹೇಳಿದ್ದಾರೆ ಎಂದು ಟಾಂಗ್ ಕೊಟ್ಟರು.

ನಾಳೆ ಯಾರೇ ದುಡ್ಡು ತಿಂದರೂ ಪ್ರಧಾನಿ ಹೆಸರು ಹೇಳಬಹುದಾ? ನರೇಗಾ ವಿಚಾರ ಡೈವರ್ಟ್ ಮಾಡೋಕೆ ಅಷ್ಟೇ ಇವರು ಧರಣಿ ಮಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

Key words:  Opposition parties, Protest, Minister, M.B. Patil