Monday, September 21, 2026

BDA Apartments

ವಿಪಕ್ಷಗಳ ಅಹೋರಾತ್ರಿ ಧರಣಿ: ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದ ಸಚಿವ ತಿಮ್ಮಾಪ...
Home Front Page ವಿಪಕ್ಷಗಳ ಅಹೋರಾತ್ರಿ ಧರಣಿ: ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದ ಸಚಿವ ತಿಮ್ಮಾಪುರ

ವಿಪಕ್ಷಗಳ ಅಹೋರಾತ್ರಿ ಧರಣಿ: ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದ ಸಚಿವ ತಿಮ್ಮಾಪುರ

ಬೆಂಗಳೂರು,ಫೆಬ್ರವರಿ,4,2026 (www.justkannada.in):  ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಸಚಿವ ಆರ್.ಬಿ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷ ಸದಸ್ಯರು ಅಹೋರಾತ್ರಿ ಧರಣಿ ನಡೆಸಿದ್ದಾರೆ.

ವಿಪಕ್ಷಗಳ ಧರಣಿಗೆ ಆಕ್ಷೇಪಿಸಿ ಮಾತನಾಡಿರುವ ಅಬಕಾರಿ ಇಲಾಖೆ ಸಚಿವ ಆರ್.ಬಿ ತಿಮ್ಮಾಪುರ,  ನಾನು ರಾಜೀನಾಮೆ  ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಆರ್. ಅಶೋಕ್ ಯಾರ ಮಾತನ್ನ ಕೇಳಿ ಆರೋಪ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ.  ವಿರೋಧ ಪಕ್ಷದ ನಾಯಕರಿಗೆ ಯಾಕೆ ರಾತ್ರಿ ನಿದ್ದೆ ಬಂದಿಲ್ಲ ಗೊತ್ತಿಲ್ಲ. ವಿರೋಧ ಪಕ್ಷಗಳು ರಾಜಕಾರಣ ಮಾಡಲಿ ಎಂದು  ಆರ್ ಬಿ ತಿಮ್ಮಾಪುರ ಹೇಳಿದರು.

Key words: Opposition, parties, Minister, RB Thimmapura, no question