ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಕೇಸ್ : ತನಿಖೆಗೆ SIT ರಚನೆ

ಬೆಂಗಳೂರು, ಜನವರಿ,31,2026 (www.justkannada.in)  ಕಾನ್ಫಿಡೆಂಟ್ ಗ್ರೂಪ್‌ ನ ಅಧ್ಯಕ್ಷ ಉದ್ಯಮಿ ಡಾ. ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ, ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದೆ.

ಸರ್ಕಾರವು ಪ್ರಕರಣವನ್ನು ಎಸ್ ಐಟಿಗೆ ವರ್ಗಾಯಿಸಿದ್ದು,  ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್, ಐಪಿಎಸ್ ಅವರನ್ನು ಮುಖ್ಯ ತನಿಖಾಧಿಕಾರಿಯಾಗಿ ನೇಮಕ ಮಾಡಿ ಎಸ್ ಐಟಿ ರಚನೆ ಮಾಡಲಾಗಿದೆ. ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತ ಅಕ್ಷಯ್ ಹಾಕೆ, ಐಪಿಎಸ್ ಸೇರಿದಂತೆ ವಿವಿಧ ವಿಭಾಗಗಳು ಮತ್ತು ವಿಶೇಷ ಘಟಕಗಳಿಂದ ನಿಯೋಜಿಸಲಾದ ಹಿರಿಯ ಅಧಿಕಾರಿಗಳು ತಂಡದ ಸದಸ್ಯರಾಗಿದ್ದಾರೆ. ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತ  ಸಿ. ವಂಶಿ ಕೃಷ್ಣ, ಅವರ ಸಮಗ್ರ ಮೇಲ್ವಿಚಾರಣೆಯಡಿಯಲ್ಲಿ ಎಸ್ ಐಟಿ ಕಾರ್ಯನಿರ್ವಹಿಸಲಿದೆ.

ಉದ್ಯಮಿ ಡಾ. ಸಿ.ಜೆ. ರಾಯ್ ಅವರು ನಿನ್ನೆ ತಮ್ಮ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಐಟಿ ದಾಳಿಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.

Key words: Businessman, C.J. Roy, suicide case, SIT, investigation