ಬೆಂಗಳೂರು,ಜನವರಿ,31,2026 (www.justkannada.in): ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಂತರ ಆತ್ಮಹತ್ಯೆಗೆ ಕಾರಣ ತಿಳಿದು ಬರಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಡಿಸೆಂಬರ್ ನಲ್ಲಿ ರಾಯ್ ಕಂಪನಿ ಮೇಲೆ ಐಟಿ ದಾಳಿ ನಡೆದಿತ್ತು. 60 ದಿನದಲ್ಲಿ ಚಾರ್ಜ್ ಶೀಟ್ ಕಡ್ಡಾಯ ಅಂತಾ ನಿಯಮ ಇದೆ. ಫೆ 4 ರೊಳಗೆ ಫೈನಲ್ ಮಾಡಬೇಕು ಎಂದು ರಾಯ್ ಅವರನ್ನ ಕರೆದಿದ್ದರು ರಾಯ್ ಕಚೇರಿಗೆ ಹೋಗಿ ಐಟಿ ಅದಿಕಾರಿಗಳು ಮಾಹಿತಿ ಕೇಳಿದ್ದಾರೆ.
ಈ ವೇಳೆ ಐದು ನಿಮಿಷ ಒಳಗಡೆ ಹೋಗಿ ಬರ್ತಿನಿ ಅಂತೇಳಿ ರಾಯ್ ಹೋಗಿದ್ದಾರೆ. ಬಳಿಕ 20 ನಿಮಿಷವಾದರೂ ಬರಲಿಲ್ಲ. ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ತನಿಖೆಯಾದ ಬಳಿಕ ಆತ್ಮಹತ್ಯೆಗೆ ಕಾರಣ ತಿಳಿದು ಬರಲಿದೆ ಎಂದು ಪರಮೇಶ್ವರ್ ತಿಳಿಸಿದರು.
Key words: CJ Ray, Suicide case, Minister, Parameshwar







