ಮೈ-ಬೆಂ ದಶಪಥ ಹೆದ್ದಾರಿಯಲ್ಲಿ ವೇಗದ ಮಿತಿ, ಸರ್ವಿಸ್ ರಸ್ತೆಯ ಅಗಲೀಕರಣ: ಕ್ರಮಗಳ ಬಗ್ಗೆ ಉತ್ತರ ಕೊಟ್ಟ ಸಚಿವರು.

ಬೆಂಗಳೂರು,ಜನವರಿ,31,2026 (www.justkannada.in): ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ವೇಗದ ಮಿತಿ ಮತ್ತು ಸರ್ವೀಸ್ ರಸ್ತೆಯ ಅಗಲೀಕರಣ ಕುರಿತು ಅಧಿವೇಶನದಲ್ಲಿ  ವಿಧಾನಪರಿಷತ್  ಸದಸ್ಯ ಕೆ.ಶಿವಕುಮಾರ್ ಪ್ರಶ್ನಿಸಿದ್ದು ಇದಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಉತ್ತರ ನೀಡಿದ್ದಾರೆ.

ಈ ಸಂಬಂಧ ವಿಧಾನಪರಿಷತ್ ನಲ್ಲಿ ಎಂಎಲ್ ಸಿ ಕೆ. ಶಿವಕುಮಾರ್ ಪ್ರಸ್ತಾಪಿಸಿದ್ದು ,  ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಸ್ತುತ ವಾಹನಗಳ ಸಂಚಾರಕ್ಕೆ ಗಂಟೆಗೆ ಎಷ್ಟು ಕಿಲೋಮೀಟರ್ ಗಳ ಗರಿಷ್ಠ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸುರುವ ಸಚಿವ ಸತೀಶ್ ಜಾರಕಿಹೊಳಿ

Concessionaire Agreement  ಪ್ರಕಾರ NH-275 ರ ನಿಯಂತ್ರಿತ ಬೆಂಗಳೂರು-ಮೈಸೂರು ಹೆದ್ದಾರಿಯ ವಿಭಾಗವನ್ನು ಗರಿಷ್ಠ ವಿನ್ಯಾಸ ವೇಗ ಗಂಟೆಗೆ 100 ಕಿ.ಮೀ.ಗೆ ನಿರ್ಮಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವರದಿಸಿರುತ್ತಾರೆ. ಸದರಿ ಹೆದ್ದಾರಿಯ ಗುಣಮಟ್ಟ ಮತ್ತು ಸುರಕ್ಷತೆಯನ್ನು ಪರಿಗಣಿಸಿ. ಈಗಿರುವ ವೇಗದ ಮಿತಿಯನ್ನು ಹೆಚ್ಚಿಸುವ ಬಗ್ಗೆ ಮುಂದೆ ಸರ್ಕಾರದ ಯಾವುದೇ ಪ್ರಸ್ತಾವನೆ ಇಲ್ಲ ಎಂದಿದ್ದಾರೆ.

ಈ ಹೆದ್ಮಾರಿಯಲ್ಲಿ ಸಂಚರಿಸುವ ಜನಸಾಮಾನ್ಯರಿಗೆ ಅನುಕೂಲವಾಗುವಂತೆ, ಟೋಲ್ ರಹಿತ ಸರ್ವೀಸ್ ರಸ್ತೆಗಳನ್ನು (Service Roads) ಪೂರ್ಣ ಪ್ರಮಾಣದಲ್ಲಿ ಅಗಲೀಕರಣ ಮಾಡುವ ಮತ್ತು ಅಭಿವೃದ್ಧಿಪಡಿಸುವ ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ ಎಂದು ಕೆ.ಶಿವಕುಮಾರ್ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ,  ಸೇವಾ ರಸ್ತೆಯನ್ನು ಅಗಲಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ. ಆದಾಗ್ಯೂ, ಹೆದ್ದಾರಿಯಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳಾಗಿ 3 ROB ಸ್ಥಳಗಳಲ್ಲಿ ಸೇವಾ ರಸ್ತೆಯ ಮುಂದುವರಿಕೆ ಮತ್ತು ಮುಚ್ಚಿದ ಟೋಲಿಂಗ್‌ ನೊಂದಿಗೆ ಪ್ರವೇಶ ನಿರ್ಗಮನ, ಬಸ್ ಶೆಲ್ಮರ್‌ ಗಳು, ಮಣಿಪಾಲ ಜಂಕ್ಷನ್ ಮೈಸೂರಿನಲ್ಲಿ ಜಂಕ್ಷನ್ ಸುಧಾರಣೆ ಕಾರ್ಯಗಳು ಇತ್ಯಾದಿಗಳನ್ನು NHAI ಕೈಗೆತ್ತಿಕೊಳ್ಳುತ್ತಿದೆ. ಈ ಕೆಲಸವನ್ನು M/S ಧಾರಿವಾಲ್ ಬಿಲ್ಡ್‌ ಟೆಕ್ ಲಿಮಿಟೆಡ್‌ ನೀಡಲಾಗಿದೆ ಮತ್ತು Appointed Date ಅನ್ನು ದಿನಾಂಕ: 20.01.2026 ರಂದು ಘೋಷಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವರದಿ ನೀಡಿದ್ದಾರೆ ಎಂದರು.

ಹಾಗೆಯೇ ಸರ್ವಿಸ್ ರಸ್ತೆಯ ಅಗಲೀಕರಣಕ್ಕೆ ಯಾವುದೇ ಪ್ರಸ್ತಾವನೆ ಇಲ್ಲ. ಆದರೆ ರಸ್ತೆಯಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು, ಮೇಲೆ ಹೇಳಿದಂತೆ 3 ROB ಸ್ಥಳಗಳಲ್ಲಿ ಸರ್ವಿಸ್ ರಸ್ತೆಯ ಮುಂದುವರಿಕೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.

Key words: Speed ​​limit, Bangalore- Mysore highway, MLC, K.Shivakumar, Minister