ಬೆಂಗಳೂರು,ಜನವರಿ,30,2026 (www.justkannada.in): ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ತಪಾಸಣೆ ವೇಳೆ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಅಬು ಅಕಿಲ್ ಅಜರ್ ಚಾದ್ ಬಂಧಿತ ಆರೋಪಿ. ಈತ ಬೆಂಗಳೂರಿನಿಂದ ಅಹಮದಾಬಾದ್ ಗೆ ತೆರಳುತ್ತಿದ್ದನು. ಈ ಮಧ್ಯೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಎರಡು ಕಡೆ ಬ್ಯಾಗ್ ಅನ್ನು ಸಂಪೂರ್ಣ ಚೆಕ್ ಮಾಡಿದ್ದರು. ಇದರಿಂದ ಕೋಪಗೊಂಡ ಅಬು ಅಕಿಲ್ ಅಜರ್ ಚಾದ್ ಬ್ಯಾಗ್ ನಲ್ಲಿ ಚಿಕ್ಕ ಚಿಕ್ಕ 2 ಬಾಂಬ್ ಇದೆ ಎಂದು ಬೆದರಿಕೆ ಹಾಕಿದ್ದನು.
ಕೂಡಲೇ ಏರ್ ಪೋರ್ಟ್ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ನೀಡಿದರು. ಇದೀಗ ಆರೋಪಿ ಅಬು ಅಕಿಲ್ ಅಜರ್ ಚಾದ್ ನನ್ನು ಬಂಧಿಸಿದ್ದು, ಕೆಂಪೇಗೌಡ ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Kempegowda Airport, arrested, threatening, bomb ,bag







