MDA ಕಾರ್ಯಾಚರಣೆ: ಸಿಎ ನಿವೇಶನದಲ್ಲಿ ನಿರ್ಮಾಣವಾಗಿದ್ದ ಅನಧಿಕೃತ ಶಾಲಾ ಕಟ್ಟಡ ತೆರವು

ಮೈಸೂರು,ಜನವರಿ,29,2026 (www.justkannada.in): ಸಿಎ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಶಾಲಾ ಕಟ್ಟಡವನ್ನ ಮೈಸೂರು ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಜೆಸಿಬಿ ಯಂತ್ರದ ಮೂಲಕ ಅನಧಿಕೃತ ಕಟ್ಟಡವನ್ನ ನೆಲಸಮಗೊಳಿಸಿ ಎಂಡಿಎ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಮೈಸೂರು ತಾಲೂಕು ವರುಣಾ ಹೋಬಳಿ ವಾಜಮಂಗಲ ಗ್ರಾಮದ ಸರ್ವೆ ನಂ.30 ರ 0-06 ಗುಂಟೆ,0/2 ರ 0-31 ಗುಂಟೆ ಮತ್ತು 30/6 ರ 0-37 ಗುಂಟೆ ಒಟ್ಟು 1 ಎಕ್ರೆ 34 ಗುಂಟೆ ಜಮೀನು ಮೈಸೂರು ಅಭಿವೃದ್ದಿ ಪ್ರಾಧಿಕಾರದ ಸೊತ್ತು.ಇದರಲ್ಲಿ 378.18 ಚದರ ಮೀಟರ್ ವಿಸ್ತೀರ್ಣದ ಜಾಗವನ್ನ ಸಿಎ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ಸದರಿ ಸಿಎ ನಿವೇಶನದಲ್ಲಿ ರಾಘವೇಂದ್ರ ಪಿಸಿ ಎಜುಕೇಷನ್ ಹಾಗೂ ಚಾರಿಟೇಬಲ್ ಟ್ರಸ್ಟ್ ನವರು ಅನಧಿಕೃತವಾಗಿ ಶಾಲಾ ಕಟ್ಟಡ ನಿರ್ಮಿಸುತ್ತಿದ್ದರು. ಈ ಮಾಹಿತಿ ಅರಿತ ಪ್ರಾಧಿಕಾರದ ಆಯುಕ್ತ ಟಿ.ಎಸ್.ರಕ್ಷಿತ್  ಅವರು ಅದನ್ನು ರಕ್ಷಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.

ಇಂದು ಉದಯಗಿರಿ ಠಾಣಾ ಪೊಲೀಸರ ನೆರವಿನಿಂದ ಅನಧಿಕೃತ ಕಟ್ಟಡವನ್ನ ನೆಲಸಮಗೊಳಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ. ಸದರಿ ನಿವೇಶನದ ಮೌಲ್ಯ ಸುಮಾರು 80 ರಿಂದ 90 ಲಕ್ಷ ಎನ್ನಲಾಗಿದೆ. ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ ಕುಮಾರ್, ಕಿರಿಯ ಅಭಿಯಂತರ ಜಿ.ರಾಜಶೇಖರ್, ಭೂಮಾಪಕರಾದ ರಘು ರವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಪ್ರಾಧಿಕಾರದ ಆಸ್ತಿ ಸಂರಕ್ಷಣೆಗಾಗಿ 13-10-2025 ರಂದು ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಕಾರ್ಯಪಾಲಕ ಅಭಿಯಂತರ ಮಹೇಶ್ ಹಾಗೂ ನಾಗೇಶ್ ,ಅಧಿಕಾರಿಗಳಾದ ರಾಜಶೇಖರ್, ಭರತ್ ಕುಮಾರ್, ರಘು, ಸಚಿನ್, ರವಿಪ್ರಸಾದ್, ಗಂಗಾಧರ್, ಮಹದೇವಸ್ವಾಮಿ, ಶೃತಿ, ಕೆಂಪಣ್ಣ, ಉಮೇಶ್ ರವರನ್ನೊಳಗೊಂಡಿದೆ.

Key words: MDA, CA site, Unauthorized, school building, vacated