ಮಂಡ್ಯ,ಜನವರಿ,28,2026 (www.justkannada.in): ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಪಾಂಡವಪುರ ತಾಲೂಕಿನ ಹರಳಹಳ್ಳಿಯ ಪದ್ಮ ಶ್ರೀ ಪ್ರಶಸ್ತಿ ವಿಜೇತ ಅಂಕೇಗೌಡ ಅವರು ನಿರ್ಮಿಸಿರುವ “ಪುಸ್ತಕ ಮನೆ” ಗೆ ಭೇಟಿ ನೀಡಿದರು.
ಪುಸ್ತಕ ಮನೆಯಲ್ಲಿ ಸಂಗ್ರಹಿಸಲಾಗಿರುವ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಪುಸ್ತಕಗಳು, ನಾಣ್ಯಗಳು, ಅಂಚೆ ಚೀಟಿಗಳು ಮತ್ತು ಅಪರೂಪದ ಲಗ್ನ ಪತ್ರಿಕೆಗಳನ್ನು ಜಿಲ್ಲಾಧಿಕಾರಿ ಡಾ.ಕುಮಾರ ವೀಕ್ಷಸಿದರು. ಪದ್ಮ ಶ್ರೀ ಪ್ರಶಸ್ತಿ ವಿಜೇತ ಅಂಕೇಗೌಡರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ನಂತರ ಅವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪಾಂಡವಪುರ ಉಪ ತಹಶೀಲ್ದಾರ್ ಸಂತೋಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Key words: Padma Shri, awardee, Anke Gowda, felicitated, Mandya DC







