ಬೆಂಗಳೂರು,ಜನವರಿ,28,2026 (www.justkannada.in): ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ನಂತರ ರಾಜ್ಯಪಾಲರಿಗೆ ಅಪಮಾನ ಮಾಡಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನ ನಿರ್ಣಯದ ಮೇಲೆ ಚರ್ಚೆ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಪಾಲರು ಓಡಿಹೋದ್ರು ಅಂತಾರೆ. ಓಡಿ ಹೋಗುವ ವಯಸ್ಸಾ ಅದು. ರಾಜ್ಯಪಾಲರಿಗೆ ಅಪಮಾನವಾಗಿದೆ. ಎಂಎಲ್ ಸಿ ಬಿಕೆ ಹರಿಪ್ರಸಾದ್ ಬೆರಳು ತೋರಿಸಿ ಮಾತನಾಡಿದ ವಿಡಿಯೋ ಇದೆ. ಹರಿಪ್ರಸಾದ್ ಬಟ್ಟೆ ಹರಿದುಕೊಂಡಿದ್ದಾರೆ ಅವರಿಗಾದ್ರೂ ಏನಾಗಿದೆ ಅಂತಾ ನ್ಯಾಯ ಕೊಡಿಸಬೇಕಲ್ವಾ..? ಎಂದರು.
ರಾಜ್ಯಪಾಲರಿಗೆ ಅಪಮಾನ ಮಾಡಿದ್ದೀರಿ ಸರ್ಕಾರ ಕ್ಷಮೆ ಕೇಳಲಿ ವಂದನ ನಿರ್ಣಯನೋ? ಖಂಡನಾ ನಿರ್ಣಯನೋ? ಆ ಕಡೆ ಒಬ್ಬರೂ ವಂದನಾ ನಿರ್ಣಯ ಮಾಡಿಲ್ಲ. ಗಾಂಧೀಜಿಗೆ ಅಪಮಾನ ಮಾಡಿದ್ದೀರಿ ಅಂತಾ ಪ್ರದೀಪ್ ಹೇಳಿದರು. ನೀವು ರಾಜಕೀಯ ಭಾಷಣ ಮಾಡೋದಾದರೆ ಹೊರಗಡೆ ಮಾಡಿ ಎಂದು ಅಶೋಕ್ ಕಿಡಿ ಕಾರಿದರು.
Key words: Insult, Governor, government, apologize, R. Ashok







