Tuesday, September 15, 2026

BDA Apartments

ಅಜಿತ್ ಪವಾರ್ ನಿಧನ ಇಡೀ ರಾಷ್ಟ್ರಕ್ಕೆ ದೊಡ್ಡ ನಷ್ಟ-ಸಿಎಂ ಸಿದ್ದರಾಮಯ್ಯ BDA JK_Adv B...
Home Front Page ಅಜಿತ್ ಪವಾರ್ ನಿಧನ ಇಡೀ ರಾಷ್ಟ್ರಕ್ಕೆ ದೊಡ್ಡ ನಷ್ಟ-ಸಿಎಂ ಸಿದ್ದರಾಮಯ್ಯ

ಅಜಿತ್ ಪವಾರ್ ನಿಧನ ಇಡೀ ರಾಷ್ಟ್ರಕ್ಕೆ ದೊಡ್ಡ ನಷ್ಟ-ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜನವರಿ,28,2026 (www.justkannada.in):  ವಿಮಾನ ದುರಂತದಲ್ಲಿ ಅಜಿತ್ ಪವಾರ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಜಿತ್ ಪವಾರ್  ನಿಧನವು ಬಹಳ ನೋವಿನ ಸಂಗತಿ ಪವಾರ್  ಅವರು ಸಂಸದರು,  ಶಾಸಕರು ಮಂತ್ರಿ ಕೂಡ ಆಗಿದ್ದರು. ನಾನು ಕೂಡ  ಈ ಹಿಂದೆ ಮಹಾರಾಷ್ಟ್ರದ ಬಾರುಮತಿಗೆ ಹೋಗಿದ್ದೆ ಅವರು ವಿಪಕ್ಷ ನಾಯಕರಾಗಿದ್ದರು.  ಆಗ ನನ್ನನ್ನು ಕರೆದುಕೊಂಡು ಹೋಗಿದ್ದರು ಎಂದು ಸ್ಮರಿಸಿದರು.

ಅಜಿತ್ ಪವಾರ್ ಬಾರುಮತಿಯಲ್ಲಿ ಬಹಳ ಜನಪ್ರಿಯರಾಗಿದ್ದರು. ಅವರ ನಿಧನ ರಾಷ್ಟ್ರಕ್ಕೆ ದೊಡ್ಡ ನಷ್ಟ ಅವರ ಕುಟುಂಬಕ್ಕೆ  ದುಃಖ ಭರಿಸುವ ಶಕ್ತಿ  ನೀಡಲೆಂದು ಪ್ರಾರ್ಥಿಸುವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: Ajit Pawar, death, big loss, nation, CM Siddaramaiah