ಮೈಸೂರು,ಜನವರಿ,27,2026 (www.justkannada.in): ರಂಗವಲ್ಲಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ಜನವರಿ 28 ಮತ್ತು 29ರಂದು ‘ತಟ್ಟೆ ಇಡ್ಲಿ ರಾದ್ಧಾಂತ’ ಹಾಸ್ಯ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಅಂದು ಸಂಜೆ 7ಕ್ಕೆ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ‘ತಟ್ಟೆ ಇಡ್ಲಿ ರಾದ್ಧಾಂತ’ ಪತ್ತೇದಾರಿ ಹಾಸ್ಯ ನಾಟಕ ಪ್ರದರ್ಶಿಸಲಿದೆ. ರಂಗಾಯಣದ ಹಿರಿಯ ಕಲಾವಿದ ಮಾಯಸಂದ್ರ ಕೃಷ್ಣಪ್ರಸಾದ್ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ಮಧು ನೀನಾಸಂ ಬೆಳಕಿನ ವಿನ್ಯಾಸ, ಹೆಚ್.ಕೆ. ದ್ವಾರಕಾನಾಥ್ ರಂಗವಿನ್ಯಾಸ, ಉದಿತ್ ಹರಿತಸ್ ಹಿನ್ನೆಲೆ ಸಂಗೀತವಿದೆ.
ಹೆಚ್ಚಿನ ವಿವರಗಳಿಗೆ 9964656482 ಸಂಪರ್ಕಿಸಬಹುದು ಎಂದು ಮಂಜುನಾಥ್ ಸಿ.ಎನ್ ತಿಳಿಸಿದ್ದಾರೆ.
Key words: Comedy, drama, Thatte Idli Raddhanta, Mysore







