ಬೆಂಗಳೂರು,ಜನವರಿ,26,2026 (www.justkannada.in): ನನ್ನ ಪ್ರಕಾರ 2028ರಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ನಮ್ಮ ಅಭಿವೃದ್ದಿ ಕೆಲಸ ನೋಡಿ ಜನ ನಮಗೆ ಮತ ಹಾಕುತ್ತಾರೆ, ಅಧಿಕಾರ ಕೊಡುತ್ತಾರೆ. ಬಿಜೆಪಿ ಅವಧಿಯಲ್ಲಿ ಎಷ್ಟು ಬಾರಿ ಸಿಎಂ ಬದಲಾವಣೆ ಆದರು ಜನರು ಇದೆಲ್ಲವನ್ನೂ ನೋಡಿದ್ದಾರೆ.
ಬಿಜೆಪಿ ಆಡಳಿತ ವೈಪಲ್ಯತೆ ನೋಡಿ ಜನ ನಮಗೆ ಮೆಜಾರಿಟಿ ಕೊಟ್ಟರು. ಮುಂದೆಯೂ ಅದೇ ರೀತಿಯಲ್ಲಿ ನಮ್ಮದೇ ಸರ್ಕಾರ ಅಧಿಕಾರ ಬರುತ್ತೆ. ನನ್ನ ಪ್ರಕಾರ 2028ರಲ್ಲೂ ಕಾಂಗ್ರೆಸ್ ಅಧಿಕಾರ ಬರುತ್ತೆ ಎಂದು ರಾಮಲಿಂಗರೆಡ್ಡಿ ತಿಳಿಸಿದರು.
Key words: Congress, power, Minister, Ramalingareddy







