ಹುಬ್ಬಳ್ಳಿ,ಜನವರಿ,24,2026 (www.justkannada.in): ವಸತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗೃಹಮಂಡಳಿ ವತಿಯಿಂದ ಇಂದು ಹುಬ್ಬಳ್ಳಿಯಲ್ಲಿ ಗೃಹ ಮಂಡಳಿ ನಿರ್ಮಿಸಿರುವ ಮನೆಗಳನ್ನ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.
ಮನೆಗಳನ್ನ ಪಡೆದ ಅರ್ಹ ಫಲಾನುಭವಿಗಳಿಗೆ ಈ ಬಗ್ಗೆ ತಮ್ಮ ಅನಿಸಿಕೆಗಳನ್ನ ಹಂಚಿಕೊಂಡಿದ್ದಾರೆ. ಹುಬ್ಬಳ್ಳಿ ಮನೆ ಪಡೆದ ಕೆಲವು ಫಲಾನುಭವಿಗಳ ಅನಿಸಿಕೆಗಳು ಹೀಗಿವೆ..
ನಾವು ಈ ಮನೆಗಾಗಿ ಬರೋಬ್ಬರಿ 13 ವರ್ಷಗಳ ಹಿಂದೆ ಅರ್ಜಿಯನ್ನು ಸಲ್ಲಿಸಿದ್ದೆವು. ಅಂದಿನಿಂದ ಇಂದಿನವರೆಗೆ ನಮ್ಮ ಸ್ವಂತ ಮನೆಯ ಕನಸು ಕೈಗೂಡಬಹುದು ಎಂಬ ನಿರೀಕ್ಷೆಯಲ್ಲಿದ್ದೆವು, ಯೋಜನೆಯ ನಿಯಮದಂತೆ ಅಂದೇ 78 ಸಾವಿರ ರೂಪಾಯಿಗಳನ್ನು ಕಂತಿನ ರೂಪದಲ್ಲಿ ಪಾವತಿಸಲಾಗಿತ್ತು. ಈಗ ಮನೆ ಕೈಸೇರುತ್ತಿರುವುದು ನೆಮ್ಮದಿ ತಂದಿದೆ ಎಂದು ಅವರು ತಿಳಿಸಿದರು. ಇಷ್ಟು ವರ್ಷಗಳ ನಂತರ ನಮ್ಮ ಹಕ್ಕು ನಮಗೆ ಸಿಕ್ಕಿದೆ. ಹೊಸ ಮನೆಯನ್ನು ಹಸ್ತಾಂತರಿಸುತ್ತಿರುವ ಸರ್ಕಾರಕ್ಕೆ ನಾವು ಹೃದಯಪೂರ್ವಕ ಧನ್ಯವಾದಗಳನ್ನು ಹೇಳುತ್ತೇವೆ.
— ಸರೋಜಾದೇವಿ ನಾಗೇಂದ್ರ ಪೂಜಾರಿ, ಮಂಟೂರ ರಸ್ತೆ, ಹುಬ್ಬಳ್ಳಿ
ದೈಹಿಕ ಅಶಕ್ತತೆಯಿಂದಾಗಿ ನಮಗೆ ಬೇರೆಯವರಂತೆ ದುಡಿಯಲು ಆಗುವುದಿಲ್ಲ. ಸ್ವಂತ ಮನೆ ಎಂಬುದು ನಮಗೆ ಕನಸಾಗಿತ್ತು. ನಮ್ಮ ಕಷ್ಟವನ್ನು ಅರಿತ ಸರ್ಕಾರವು ನಮಗೆ ಮನೆ ಮಂಜೂರು ಮಾಡಿದೆ. ಈಗ ನಾವು ನೆಮ್ಮದಿಯಿಂದ ತಲೆ ಚಾಚಲು ಒಂದು ಆಸರೆ ಸಿಕ್ಕಿದೆ ಎಂದು ಹೇಳಿದರು.
-ಮೋದಿನಸಾಬ ಜಂಡಿರಸಾಬ ಕಾಗದಗರ
A-8 Block HouseNo-1 ಹುಬ್ಬಳ್ಳಿ
ಇಷ್ಟು ದಿನ ಬಾಡಿಗೆ ಕಟ್ಟಲು ಸಾಧ್ಯವಾಗದೆ ನಾವು ಪಡಬಾರದ ಕಷ್ಟ ಪಟ್ಟಿದ್ದೇವೆ. ಸಂಸಾರ ನಡೆಸುವುದು ಒಂದು ದೊಡ್ಡ ಸವಾಲಾಗಿತ್ತು. ಅಂತಹ ಸಂದರ್ಭದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವುದು ನಮಗೆ ಕೇವಲ ಕನಸಿನ ಮಾತಾಗಿತ್ತು. ಆದರೆ ಇಂದು ನಮಗೆ ಆಸರೆಯಾಗಿ ನಿಂತು ಮನೆ ಕಟ್ಟಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಇಂದಿನ ದುಬಾರಿ ಕಾಲದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಎಂಬುದು ಗಗನಕುಸುಮವಾಗಿತ್ತು. ಆದರೆ ಸರ್ಕಾರದ ಈ ಯೋಜನೆಯು ಹಲವು ನಿರಾಶ್ರಿತ ಕುಟುಂಬಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ನಮ್ಮ ಆದಾಯವೆಲ್ಲ ಬಾಡಿಗೆಗೇ ಸರಿಯಾಗುತ್ತಿತ್ತು, ಇನ್ನು ಮನೆ ಕಟ್ಟಲು ಹಣ ಎಲ್ಲಿಂದ ತರುವುದು? ಎಂದು ಫಲಾನುಭವಿಗಳು ತಮ್ಮ ಹಳೆಯ ಕಹಿ ದಿನಗಳನ್ನು ನೆನಪಿಸಿಕೊಂಡರು. ನಿರಾಶ್ರಿತರಿಗೆ ಆದ್ಯತೆಯ ಮೇಲೆ ಮನೆ ಕಟ್ಟಿ ಕೊಡುವ ಈ ಮಹತ್ವಾಕಾಂಕ್ಷಿ ಯೋಜನೆಯಿಂದಾಗಿ ಇಂದು ನೂರಾರು ಕುಟುಂಬಗಳು ಸುರಕ್ಷಿತವಾದ ಸೂರಿನಡಿ ವಾಸಿಸುವಂತಾಗಿದೆ. ಕೇವಲ ಇಟ್ಟಿಗೆ-ಮಣ್ಣಿನ ಗೋಡೆಯಲ್ಲ, ಇದು ನಮಗೆ ಕುಟುಂಬಗಳ ಭವಿಷ್ಯದ ಭರವಸೆಯಾಗಿದೆ ಎಂದು ಹೇಳಿದರು.
-ಸುಧಾ ಸೀತಾರಾಮ ಸರ್ವದೇ
A-4 Block HouseNo-3 ಹುಬ್ಬಳ್ಳಿ
ಮೂವತ್ತು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಬದುಕುತ್ತಾ ಸ್ವಂತ ಮನೆಯ ಕನಸನ್ನೇ ನಂಬಿಕೊಂಡಿದ್ದೆ. ಅನೇಕ ಬಾರಿ ಅರ್ಜಿ ಹಾಕಿ ನಿರಾಸೆಯಾದೆ. ಇಂದು ಕಾಂಗ್ರೆಸ್ ಸರ್ಕಾರ ನಮಗೆ ಮನೆ ಹಕ್ಕು ನೀಡಿರುವುದು ನಮ್ಮ ಕುಟುಂಬಕ್ಕೆ ಭದ್ರತೆ ತಂದಿದೆ. ಮಕ್ಕಳ ಭವಿಷ್ಯದ ಬಗ್ಗೆ ಇರುವ ಆತಂಕ ಕಡಿಮೆಯಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ನಾನು ಮತ್ತು ನನ್ನ ಕುಟುಂಬ ಸದಾ ಋಣಿಯಾಗಿರುತ್ತೇವೆ. ನಮ್ಮಂತಹ ಸಾಮಾನ್ಯ ಜನರ ಬದುಕಿಗೆ ಆಸರೆಯಾದ ಸರ್ಕಾರಕ್ಕೆ ಧನ್ಯವಾದಗಳು.
-ಪವನ ಪರಶುರಾಮ ಮುಂಡರಗಿ
ಹಕ್ಕು ಪತ್ರ ಫಲಾನುಭವಿ
ಪಡದಯ್ಯನ ಹಕ್ಕಲ, ಹುಬ್ಬಳ್ಳಿ
ಬಿಸಿಲಿನಲ್ಲಿ ಬೆಂದು ಸುಸ್ತಾದವನಿಗೆ ತಂಪಾದ ನೆರಳು ಸಿಕ್ಕಂತಾಗಿದೆ ಇವು ಸರ್ಕಾರದಿಂದ ಮನೆ ಪಡೆದ ಫಲಾನುಭವಿಯೊಬ್ಬರ ಮನದಾಳದ ಮಾತುಗಳು. ದೀರ್ಘಕಾಲದ ಕಾಯುವಿಕೆಯ ನಂತರ ತಮಗೆ ಮಂಜೂರಾದ ಮನೆಯನ್ನು ಕಂಡು ಹರ್ಷ ವ್ಯಕ್ತಪಡಿಸಿದ ಜನರು, ಸರ್ಕಾರದ ಈ ಜನಪರ ಕಾರ್ಯಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಬಿಸಿಲಿನಲ್ಲಿ ಅಲೆಯುವವರಿಗೆ ನೆರಳು ಸಿಕ್ಕರೆ ಎಷ್ಟು ಖುಷಿಯಾಗುತ್ತದೆಯೋ, ಅಷ್ಟೇ ಸಂತೋಷ ನಮಗೆ ಈ ಮನೆ ಸಿಕ್ಕಿದ್ದಕ್ಕೆ ಆಗಿದೆ. ನಮಗೆ ಆಸರೆ ನೀಡಿದ ಸರ್ಕಾರಕ್ಕೆ ಧನ್ಯವಾದಗಳು. ಬಡ ಮತ್ತು ಮಧ್ಯಮ ವರ್ಗದ ಜನರ ಸ್ವಂತ ಮನೆಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸರ್ಕಾರವು ಇತ್ತೀಚಿನ ದಿನಗಳಲ್ಲಿ ವಸತಿ ಯೋಜನೆಗಳಿಗೆ ಹೆಚ್ಚಿನ ವೇಗ ನೀಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
-ಕಮಲವ್ವ ಭರಮಪ್ಪ ಚಲವಾದಿ
A-2 Block HouseNo-1 ಹುಬ್ಬಳ್ಳಿ
Key words: beneficiaries, Housing Board, House, Hubballi







