ರೇವಣ್ಣನ ಬಂಧಿಸಿದ ಅಧಿಕಾರಿಗಳಿಗೆ ಉಡುಗೊರೆ ಕೊಟ್ಟಿದ್ದಾರೆ- ‘ಕೈ’ ಸರ್ಕಾರದ ವಿರುದ್ದ ಹೆಚ್ ಡಿಡಿ ಗುಡುಗು

ಹಾಸನ,ಜನವರಿ,24,2026 (www.justkannada.in):  ರೇವಣ್ಣನ ಕುಟುಂಬ ಮುಗಿಸಲು ಉಡುಗೊರೆ ನೀಡಿದ್ದಾರೆ. ರೇವಣ್ಣನ ಬಂಧಿಸಿದ ಅಧಿಕಾರಿಗಳಿಗೆ ಉಡುಗೊರೆ ಕೊಟ್ಟಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕಾಂಗ್ರೆಸ್ ಸರ್ಕಾರದ ವಿರುದ್ದ ಗುಡುಗಿದರು.

ಇಂದು ಹಾಸನದ ಹೊರವಲಯದ ಭೂವನಹಳ್ಳಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ ದೇವೇಗೌಡರು,  ಕಾಂಗ್ರೆಸ್ ನವರು ಹಾಸನದಲ್ಲಿ ಎರಡು ಸಮಾವೇಶ ಮಾಡಿದ್ರು. ನಮ್ಮ ಎದುರಾಳಿಗಳು ಇಲ್ಲಿ ನಮ್ಮನ್ನ ಮುಗಿಸಲು ಹೊರಟರು. ಜೆಡಿಎಸ್ ನಾಶ ಮಾಡ್ತೀವಿ ಅಂತಾ ಬಂದಿದ್ದರು. ಇವತ್ತು ನೀವು ಅವರಿಗೆ ಉತ್ತರ ಕೊಟ್ಟಿದ್ದೀರಿ    ನಿಮ್ಮ ಆಟ ನಡೆಯಲ್ಲ. ಹೆಚ್ ಡಿಕೆ, ರೇವಣ್ಣ ಹಿಂದೆ ಇದ್ದೇವೆ ಎಂದು ಆಡಳಿತ ನಡೆಸುವವರಿಗೆ ಸಂದೇಶ ಕೊಟ್ಟಿದ್ದೀರಿ ಎಂದರು.    ಭೂವನಹಳ್ಳಿಯಲ್ಲಿ ಸಮಾವೇಶ

ಈ ವೇದಿಕೆ ಮೇಲೆ 18 ಎಂಪಿಗಳನ್ನ ಕೂರಿಸಬೇಕೆಂಬ ಆಸೆ ಇದೆ ಮೋದಿರನ್ನು ಕರೆಸಿ ಎಂಪಿ ಕೂರಿಸಬೇಕೆಂದು ಆಸೆ ಇದೆ. ಹೆಚ್ ಡಿಕೆ ಆಸೆಯಂತೆ ಐಐಟಿ ಯನ್ನ ಕಾರ್ಯಗತ ಮಾಡುವ ಸಂಕಲ್ಪವಿದೆ . ಹೆಚ್ ಡಿಕೆ ಹಲವು ಯೋಜನೆ ಇಟ್ಟುಕೊಂಡಿದ್ದಾರೆ ಇಂಡಸ್ಟ್ರಿಯಲ್ ಕ್ಲಸ್ಟರ್ ಮಾಢಬೇಕೆಂಬ ಕನಸಿದೆ  ಎಂದು ಹೆಚ್ ಡಿ ದೇವೇಗೌಡರು ನುಡಿದರು.

Key words: Gifts,arrest, Revanna , HD Devegowda, JDS, Congress government