ಹೈಕಮಾಂಡ್ ನನ್ನ ಕೈ ಬಿಡಲ್ಲ ಎಂಬ ಡಿಕೆಶಿ ಹೇಳಿಕೆ: ಚರ್ಚಿಸುವ ಅಗತ್ಯವಿಲ್ಲ ಎಂದ ಸಚಿವ ಚಲುವರಾಯಸ್ವಾಮಿ

ಮಂಡ್ಯ,ಜನವರಿ,23,2026 (www.justkannada.in):  ಹೈಕಮಂಡ್ ನನ್ನ ಕೈಬಿಡಲ್ಲ ಎಂಬ ಡಿಸಿಎಂ ಡಿಕೆ ಶಿವಕುಮಾರ್  ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಈ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ವರಿಷ್ಠರು ನಮ್ಮ ಹಂತದಲ್ಲಿ ತೀರ್ಮಾನ ಮಾಡ್ತೇವೆ ಎಂದಿದ್ದಾರೆ. ಅದನ್ನೇ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಹೇಳಿದ್ದಾರೆ. ಇದರ ನಡುವೆ ನಮ್ಮಂಥವರು ಮಾತನಾಡುವ ಅವಶ್ಯಕತೆ ಇಲ್ಲ. ಶಾಸಕರ ಬಲಾಬಲ ಇದೆಯೋ ಇಲ್ಲವೋ ಎಂಬ ಪ್ರಶ್ನೆ ಬರಲ್ಲ.  ಸಿದ್ದರಾಮಯ್ಯ ಎಲ್ಲೂ ಪಕ್ಷ ಸರ್ಕಾರಕ್ಕೆ ಮುಜುಗರ ತಂದಿಲ್ಲ. ಡಿಕೆ ಶಿವಕುಮಾರ್ ಕೂಡ ಸಿದ್ದರಾಮಯ್ಯರನ್ನ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ ಈ ಬಗ್ಗೆ ಚರ್ಚಿಸುವ ಅವಶ್ಯಕತೆ ಇಲ್ಲ ಎಂದರು.

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡದ ವಿಚಾರ, ಸರ್ಕಾರ ತಯಾರಿ ಮಾಡಿದ ಭಾಷಣ ಓದುವುದು ಪರಿಪಾಠ. ಆದರೆ ಭಾಷಣವನ್ನು ಮಾಡದೆ  ರಾಷ್ಟ್ರಗೀತೆಯನ್ನೂ ಬಿಟ್ಟು ಹೋಗಿರುವುದು ಸರಿನಾ..? ಎಂದು ಸಚಿವ ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

Key words:  DK Shivakumar, statement, Minister, Chaluvarayaswamy