ಭಾಷಣ ಪೂರ್ತಿ ಓದಬೇಕಿತ್ತು: ಗೋ ಬ್ಯಾಕ್ ಗವರ್ನರ್ ಎಂದು ಎಲ್ಲರೂ ಹೇಳಿಲ್ಲ- ಸಚಿವ ಸತೀಶ್ ಜಾರಕಿಹೊಳಿ

ಚಿತ್ರದುರ್ಗ,ಜನವರಿ,16,2026 (www.justkannada.in): ರಾಜ್ಯ ಸರ್ಕಾರ ಸಿದ್ದಪಡಿಸಿದ್ದ  ಸಿದ್ದಪಡಿಸಿದ ಭಾಷಣವನ್ನು ರಾಜ್ಯಪಾಲರು ಪೂರ್ತಿ ಓದಬೇಕಿತ್ತು. ಆದರೆ ಓದಿಲ್ಲ. ಎಲ್ಲರೂ ಗೋ ಬ್ಯಾಕ್ ಗವರ್ನರ್ ಎಂದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯಪಾಲರ ನಡೆ ಬಗ್ಗೆ ನಿರ್ಧರಿಸಬೇಕಿರುವುದು ರಾಜ್ಯ ಸರ್ಕಾರ.  ರಾಜ್ಯಪಾಲರು ಸರ್ಕಾರ ಸಿದ್ದಪಡಿಸಿದ ಭಾಷಣ ಪೂರ್ತಿ ಓದಬೇಕಿತ್ತು. ಈ ಹಿಂದೆ ಹಲವು ಬಾರಿ ಕೇಂದ್ರದ ವಿರುದ್ದ ಟಿಪ್ಪಣಿ ಓದಿದ್ದಾರೆ.  ಈ ಬಾರಿ ರಾಝ್ಯಪಾಲರು ಭಾಷಣ ಓದಿಲ್ಲ ಯಾಕೆಂದರೆ ಅದು ರಾಜ್ಯ ಸರ್ಕಾರದ ಭಾಷಣ.  ಸದನದಲ್ಲಿ ಭಾಷಣ ಓದುವುದು ರಾಜ್ಯಪಾಲರ ಕರ್ತವ್ಯ ಆದರೆ ಓದಿಲ್ಲ ಮುಂದೆ ಏನಾಗುತ್ತೆ ನೋಡೋಣ ಎಂದರು.

ಬರೆದುಕೊಟ್ಟಿದ್ದೆಲ್ಲವನ್ನೂ  ಓದಬೇಕಿದಂಲ್ಲ ಎಂಬ ಬಿಎಸ್ ವೈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ,  ಅವರು ಹೇಳಿದಂತೆ ಆಗುವುದಿಲ್ಲ. ಈ ಹಿಂದೆ ರಾಜ್ಯಪಾಲರು ಓದಿದ್ದಾರೆ ಗೋಬ್ಯಾಕ್ ಗವರ್ನರ್ ಎಂದು ಯಾರೋ ಒಬ್ಬರು ಹೇಳಿರಬಹುದು. ಗರ್ವನರ್ ವಾಪಸ್ ಹೋಗಿ ಎಂದು ಎಲ್ಲರೂ ಹಾಗೆ ಹೇಳಿಲ್ಲ ಎಂದರು.

Key words: speech, governor, Minister, Satish Jarkiholi