ಬೆಂಗಳೂರು,ಜನವರಿ,23,2026 (www.justkannada.in): ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಆಗ್ರಹಿಸಿದರು.
ನಿನ್ನೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಭಾಷಣ ಮಾಡದೇ ಹೊರಟು ಹೋದ ವಿಚಾರ ಇಂದು ವಿಧಾನಮಂಡಲ ಉಭಯ ಸದನದಲ್ಲಿ ಸದ್ದು ಮಾಡುತ್ತಿದ್ದು ಆಡಳಿತ ಮತ್ತು ವಿಪಕ್ಷಗಳು ಆರೋಪ ಪ್ರತ್ಯಾರೋಪ ನಡೆಸುತ್ತಿವೆ.
ವಿಧಾನಸಭೆಯಲ್ಲಿ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ರಾಜ್ಯಪಾಲರು ಹೇಗೆ ಸಂವಿಧಾನ ಉಲ್ಲಂಘಿಸಿದ್ರು ಹೇಳುತ್ತೇನೆ. ರಾಜ್ಯಪಾಲರ ಕಚೇರಿಗೆ ಹೇಗೆ ಕೇಂದ್ರ ಸರ್ಕಾರದಿಂದ ಕರೆ ಬರುತ್ತದೆ. ಆ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಸುರೇಶ್ ಕುಮಾರ್ ಹಂಸರಾಜ್ ಭಾರಧ್ವಜ್ ಗೆ ಕರೆ ಬಂದಿದ್ದನ್ನ ಹೇಳಿ ಎಂದು ಟಾಂಗ್ ಕೊಟ್ಟರು. ಹಾಗೆಯೇ ಸ್ಪೀಕರ್ ಗೆ ಎಷ್ಟು ಕರೆ ಮಾಡಿದ್ರು ಅದನ್ನೂ ಹೇಳಿ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದರು.
ಈ ವೇಳೆ ಮಾತು ಮುಂದುವರಿಸಿದ ಸಚಿವ ಹೆಚ್.ಕೆ ಪಾಟೀಲ್, ಸಂವಿಧಾನ ಪ್ರಕಾರ ರಾಜ್ಯಪಾಲರು ಭಾಷಣ ಮಾಡಬೇಕಿತ್ತು. ಈ ಬಗ್ಗೆ ಕೋರ್ಟ್ ನಲ್ಲಿ ಆಗಿರುವ ನಿರ್ಣಯದಲ್ಲಿ ಉಲ್ಲೇಖವಾಗಿದೆ ಸಂವಿಧಾನ ಉಲ್ಲಂಘನೆ ಸದನ ಮನ್ನಿಸಲು ಸಾಧ್ಯವುಲ್ಲ. ನಿಯಮಗಳಿಂದ ರಾಜ್ಯಪಾಲರು ಎಸ್ಕೇಪ್ ಆಗಲು ಸಾಧ್ಯವಿಲ್ಲ ಎಂದರು
ರಾಜ್ಯಪಾಲರು ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಸಾಕ್ಷಿಗಳು ಆಡಿಯೋ, ವಿಡಿಯೋ ಇದೆ ರಾಜ್ಯಪಾಲರು ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಗವರ್ನರ್ ವಿರುದ್ದ ಕಿಡಿಕಾರಿದರು.
Key words: Governor, apologize, people, Minister, H.K. Patil







